1800 425 8030 ಟೋಲ್ ಫ್ರೀ 10.00AM - 5.30PM
ಎರಡನೇ ಶನಿವಾರ, ಭಾನುವಾರ ಹಾಗೂ ಸರ್ಕಾರಿ ರಜಾ ದಿನಗಳನ್ನು ಹೊರತುಪಡಿಸಿ

ನಂದಿನಿ ಬ್ರ್ಯಾಂಡಿನಡಿ ವಿವಿಧ ಮಾದರಿಯ ಬ್ರೆಡ್‍ಗಳನ್ನು ಮಾರುಕಟ್ಟೆಗೆ ಬಿಡುಗಡೆಗೊಳಿಸಿರುವ ಬಗ್ಗೆ

Date: 
15-ಜನವರಿ -2021

ಕರ್ನಾಟಕ ಹಾಲು ಮಹಾಮಂಡಳಿಯು ಕಳೆದ 4 ದಶಕಗಳಿಂದ ರುಚಿ ಮತ್ತು ಶುಚಿಯಾದ ಹಾಲು ಮತ್ತು ಹಾಲಿನ ಉತ್ಪನ್ನಗಳನ್ನು “ನಂದಿನಿ” ಬ್ರಾಂಡ್ ಅಡಿಯಲ್ಲಿ ಕೈಗೆಟಕುವ ದರದಲ್ಲಿ ಗ್ರಾಹಕರಿಗೆ ಒದಗುತ್ತಾ ಬರುತ್ತಿದ್ದು,  ಗ್ರಾಹಕರ ನೆಚ್ಚಿನ ಹಾಲಿನ ಬ್ರಾಂಡ್ ಆಗಿ ಹೊರಹೊಮ್ಮಿದೆ. ಪ್ರಸ್ತುತ ನಂದಿನಿ ಬ್ರಾಂಡ್‍ನಲ್ಲಿ 170 ಕ್ಕೂ ಹೆಚ್ಚಿನ ಹಾಲು ಮತ್ತು ಹಾಲಿನ ಉತ್ಪನ್ನಗಳು ಲಭ್ಯವಿದ್ದು, ಮಾರುಕಟ್ಟೆ ಪ್ರದೇಶ ಬೇಡಿಕೆ ಹಾಗು ಗ್ರಾಹಕರ ಅಭಿರುಚಿಯನ್ನು ಪರಿಗಣಿಸಿ ಹೊಸ ಹೊಸ ಹಾಲಿನ ಉತ್ಪನ್ನಗಳನ್ನು ಮಾರುಕಟ್ಟೆಗೆ ಬಿಡುಗಡೆಗೊಳಿಸಲಾಗುತ್ತಿದೆ.

 

ಕಹಾಮವು 2021 ನೇ ಕ್ಯಾಲೆಂಡರ್ ವರ್ಷದಲ್ಲಿಯೂ ಸಹ ಅನೇಕ ಹೊಸ ಉತ್ಪನ್ನಗಳನ್ನು ಮಾರುಕಟ್ಟೆಗೆ ಬಿಡುಗಡೆಗೊಳಿಸುವ ಉದ್ದೇಶವನ್ನು ಹೊಂದಿದ್ದು, ಈ ನಿಟ್ಟಿನಲ್ಲಿ  ಆರೋಗ್ಯಕರ ಮತ್ತು ಪೌಷ್ಟಿಕವಾದ ವಿವಿಧ 4 ಮಾದರಿಯ ನಂದಿನಿ ಗುಡ್‍ಲೈಫ್ ಬ್ರೆಡ್‍ಗಳನ್ನು  ಮೊದಲ ಹಂತದಲ್ಲಿ ಬೆಂಗಳೂರು ಮಾರುಕಟ್ಟೆ ಪ್ರದೇಶದಲ್ಲಿ ಮಾತ್ರ ಲಭ್ಯವಾಗುವಂತೆ ಕ್ರಮವಿಡಲಾಗಿದೆ.

ದರ ಪಟ್ಟಿ:

ಕ್ರ ಸಂ

ನಂದಿನಿ ಬ್ರೆಡ್‍ನ ಮಾದರಿ

ಗರಿಷ್ಠ ಮಾರಾಟ ದರ 200 ಗ್ರಾಂ ಪ್ಯಾಕ್ ಗೆ ರೂ.ಗಳಲ್ಲಿ

ಗರಿಷ್ಠ ಮಾರಾಟ ದರ 400 ಗ್ರಾಂ ಪ್ಯಾಕ್ ಗೆ ರೂ.ಗಳಲ್ಲಿ

1

ಗುಡ್ ಲೈಫ್ ಮಿಲ್ಕ್ ಬ್ರೆಡ್

        22/-       

40/-

2

ಗುಡ್ ಲೈಫ್ ಸ್ಯಾಂಡ್ವಿಚ್ ಬ್ರೆಡ್

22/-

40/-

3

ಗುಡ್ ಲೈಫ್ ವೋಲ್ ವ್ಹೀಟ್ ಬ್ರೆಡ್

25/-

45/-

4

ಗುಡ್ ಲೈಫ್ ಮಲ್ಟಿ ಗ್ರೈನ್ ಬ್ರೆಡ್

30/-

50/-

 

 

 

ದಿನಾಂಕ : 15.01.2021 ರಂದು ಕೆಎಂಎಫ್ ಕಛೇರಿಯಲ್ಲಿ  ಕೆಎಂಎಫ್‍ನ ವ್ಯವಸ್ಥಾಪಕ ನಿರ್ದೇಶಕರಾದ ಶ್ರೀ. ಬಿ.ಸಿ.ಸತೀಶ್, ಕೆಸಿಎಸ್ ರವರು ಸಾಂಕೇತಿಕವಾಗಿ ಮಾರುಕಟ್ಟೆಗೆ ಬಿಡುಗಡೆ ಮಾಡಲಾಗಿದ್ದು, ಈ ಸಂಧರ್ಭದಲ್ಲಿ ಕೆಎಂಎಫ್‍ನ ಹಿರಿಯ ಅಧಿಕಾರಿಗಳು ಸಹ ಉಪಸ್ಥಿತರಿದ್ದರು.

 

ಮುಂದುವರೆದು, ಸ್ಪರ್ಧಾತ್ಮಕ ಬೆಲೆಯಲ್ಲಿ ಉತ್ಕøಷ್ಟ ಗುಣಮಟ್ಟದ ರುಚಿಕರವಾದ ನಂದಿನಿ ಗುಡ್‍ಲೈಫ್ ಬ್ರೆಡ್‍ಗಳು ದಿನಾಂಕ 15.01.2021 ರಿಂದ ಬೆಂಗಳೂರು ಮಾರುಕಟ್ಟೆಯಲ್ಲಿ ಲಭ್ಯವಿರುವ ಬಗ್ಗೆ ಗ್ರಾಹಕರ ಗಮನಕ್ಕೆ ತಮ್ಮ ಮಾಧ್ಯಮದಲ್ಲಿ ಪ್ರಕಟಿಸುವ ಮೂಲಕ ತರುವ ಸಲುವಾಗಿ ಈ ಮೂಲಕ ಕೋರಲಾಗಿದೆ.

ವಿಳಾಸ

ಕರ್ನಾಟಕ ಸಹಕಾರಿ ಹಾಲು ಉತ್ಪಾದಕರ ಮಹಾಮಂಡಳಿ ನಿಯಮಿತ .
ಕಹಾಮ ಸಂಕೀರ್ಣ, ಅಂಚೆ ಪೆಟ್ಟಿಗೆ ಸಂಖ್ಯೆ- 2915,
ಡಿ. ಆರ್. ಕಾಲೇಜು ಅಂಚೆ, ಡಾ.ಎಂ.ಹೆಚ್.ಮರಿಗೌಡ ರಸ್ತೆ,
ಬೆಂಗಳೂರು-560029, ಕರ್ನಾಟಕ.

ದೂರವಾಣಿ

080-260 96800

ಸಹಾಯವಾಣಿ:

1800 425 8030 toll free 10.00AM - 5.30PM

(ಎರಡನೇ ಶನಿವಾರ, ನಾಲ್ಕನೇ ಶನಿವಾರ, ಭಾನುವಾರ ಹಾಗು ಇತರೆ ರಾಜ್ಯ ಸರ್ಕಾರ ರಜಾ ದಿನಗಳನ್ನು ಹೊರತು ಪಡಿಸಿ)

ನಂದಿನಿ ನೆರವು ದೂರವಾಣಿ ಸಂಖ್ಯೆ (24*7):

080-66660000

ಫಾಕ್ಸ್:: 080-255 36105