1800 425 8030 ಟೋಲ್ ಫ್ರೀ 10.00AM - 5.30PM
ಎರಡನೇ ಶನಿವಾರ, ಭಾನುವಾರ ಹಾಗೂ ಸರ್ಕಾರಿ ರಜಾ ದಿನಗಳನ್ನು ಹೊರತುಪಡಿಸಿ

ತರಬೇತಿ ಕೇಂದ್ರಗಳು

ಹಾಲು ಉತ್ಪಾದಕರ ಸಂಘಗಳ ಕಾರ್ಯಚಟುವಟಿಕೆಗಳು, ರಾಸುಗಳ ನಿರ್ವಹಣೆ, ಸಂರಕ್ಷಣೆ, ಮತ್ತು ಪಶು ಆರೋಗ್ಯ ಪಾಲನೆಯ ವಿಧಾನಗಳ ಬಗ್ಗೆ ಎಲ್ಲಾ ಹಾಲು ಒಕ್ಕೂಟಗಳ ಹಾಲು ಉತ್ಪಾದಕರ ಸಂಘಗಳ ಸಿಬ್ಬಂದಿವರ್ಗ, ಸದಸ್ಯರುಗಳಿಗೆ ಮತ್ತು ಹಾಲು ಒಕ್ಕೂಟಗಳ ಕ್ಷೇತ್ರ ಸಿಬ್ಬಂದಿವರ್ಗಕ್ಕೆ (ವಿಸ್ತರಣಾ ಅಧಿಕಾರಿಗಳು) ಅವರಲ್ಲಿನ ಅರಿವು ಮತ್ತು ಕೌಶಲ್ಯಗಳನ್ನು ವೃದ್ಧಿಸುವ ಸಲುವಾಗಿ ಕರ್ನಾಟಕ ಹೈನು ಅಭಿವೃದ್ಧಿ ನಿಗಮವು (ಕೆಡಿಡಿಸಿ) 1985ರ ಜನವರಿ 1ರಂದು ಕೇಂದ್ರೀಯ ತರಬೇತಿ ಸಂಸ್ಥೆಯನ್ನು ಪ್ರಾರಂಭಿಸಿತು.

‘ಆನಂದ್’ ಮಾದರಿಯನ್ನನುಸರಿಸಿ ಕರ್ನಾಟಕ ಹಾಲು ಮಹಾಮಂಡಳಿಯು ರೂಪಿತಗೊಂಡಾಗ ಕೇಂದ್ರೀಯ ತರಬೇತಿ ಸಂಸ್ಥೆಯನ್ನು ಕರ್ನಾಟಕ ಹಾಲು ಮಹಾಮಂಡಳಿಗೆ ವಹಿಸಿಕೊಡಲಾಯಿತು.ಈ ತರಬೇತಿ ಸಂಸ್ಥೆಯು ಕಹಾಮ ಸಮುಚ್ಛಯದಲ್ಲಿ ಸ್ಥಾಪಿಸಲ್ಪಟ್ಟಿದೆ.ಈ ಮೊದಲು ರಾಜ್ಯದಲ್ಲಿನ ಹಾಲು ಒಕ್ಕೂಟಗಳ ಕಾರ್ಯವ್ಯಾಪ್ತಿಯಲ್ಲಿನ ಎಲ್ಲಾ ಜಿಲ್ಲೆಗಳು ಈ ತರಬೇತಿ ಸಂಸ್ಥೆಯ ಕಾರ್ಯಸೂಚಿಯ ವ್ಯಾಪ್ತಿಗೆ ಒಳಪಡುತ್ತಿದ್ದವು.ರಾಜ್ಯದಲ್ಲಿನ ಹಾಲು ಉತ್ಪಾದಕರ ಸಂಘಗಳು ಯಶಸ್ವಿಯಾಗಲು ಪ್ರಾಥಮಿಕ ಹಂತದಲ್ಲಿ ತರಬೇತಿಯನ್ನು ನೀಡುವುದು ಅತ್ಯವಶ್ಯಕವಾದುದರಿಂದ, ಕೇಂದ್ರೀಯ ತರಬೇತಿ ಸಂಸ್ಥೆಯ ಶಾಖೆಗಳಾಗಿ ಮೈಸೂರು ಮತ್ತು ಧಾರವಾಡದಲ್ಲಿ ಪ್ರಾದೇಶಿಕ ತರಬೇತಿ ಸಂಸ್ಥೆಗಳನ್ನು ಪ್ರಾರಂಭಿಸಲಾಯಿತು. ಈಗ, ಎಲ್ಲಾ ಹದಿನಾಲ್ಕು ಹಾಲು ಒಕ್ಕೂಟಗಳ ಹಾಲು ಉತ್ಪಾದಕರ ಸಂಘಗಳ ಸಿಬ್ಬಂದಿವರ್ಗ ಮತ್ತು ಸದಸ್ಯರುಗಳಿಗೆ ಮೂರೂ ತರಬೇತಿ ಸಂಸ್ಥೆಗಳು ತರಬೇತಿ ನೀಡುತ್ತಲಿದ್ದು, ಕೇಂದ್ರೀಯ ತರಬೇತಿ ಸಂಸ್ಥೆಯು ಬೆಂಗಳೂರು, ಕೋಲಾರ ಮತ್ತು ತುಮಕೂರು ಒಕ್ಕೂಟಗಳು, ಮೈಸೂರು ತರಬೇತಿ ಸಂಸ್ಥೆಯು ಮೈಸೂರು, ಚಾಮರಾಜನಗರ, ಮಂಡ್ಯ, ಹಾಸನ ಮತ್ತು ದಕ್ಷಿಣ ಕನ್ನಡ ಒಕ್ಕೂಟಗಳು, ಮತ್ತು ಧಾರವಾಡ ತರಬೇತಿ ಸಂಸ್ಥೆಯು ಧಾರವಾಡ, ಕಲ್ಬುರ್ಗಿ, ಬೆಳಗಾವಿ, ಬಳ್ಳಾರಿ, ಬಿಜಾಪುರ ಮತ್ತು ಶಿವಮೊಗ್ಗ ಒಕ್ಕೂಟಗಳ ತರಬೇತಿಯ ಅಗತ್ಯತೆಯನ್ನು ನಿರ್ವಹಿಸುತ್ತಿದೆ.

ಡೇರಿ ಸಹಕಾರಿ ವ್ಯವಸ್ಥೆಯ ಸುಗಮವಾದ ನಿರ್ವಹಣೆ ಮತ್ತು ಕಾರ್ಯಾಚರಣೆಯು ಸಾಧ್ಯವಾಗಲು, ಕೇಂದ್ರೀಯ ತರಬೇತಿ ಸಂಸ್ಥೆಯು ತರಬೇತಿಯಲ್ಲಿ ವೈವಿಧ್ಯತೆಯನ್ನು ತರುವ ಸಲುವಾಗಿ ಮಾನವ ಸಂಪನ್ಮೂಲ ಹಾಗೂ ತಾಂತ್ರಿಕ ವಿಷಯಗಳಲ್ಲಿ ಕರ್ನಾಟಕ ಹಾಲು ಮಹಾಮಂಡಳಿ, ಕಹಾಮ ಘಟಕಗಳು ಮತ್ತು ಹಾಲು ಒಕ್ಕೂಟಗಳ ಉದ್ಯೋಗಿಗಳಿಗೆ ತರಬೇತಿಯನ್ನು ನೀಡುತ್ತಲಿದೆ.


ಕೇಂದ್ರೀಯ ತರಬೇತಿ ಕೇಂದ್ರವು ಬೆಂಗಳೂರು ಡೇರಿಯ ಹಿಂಬಾಗದಲ್ಲಿರುವ ಕಹಾಮ ಕಟ್ಟಡ ಸಂಕೀರ್ಣದಲ್ಲಿದೆ. ಸಂಸ್ಥೆಯು ಡಾ.ಮರಿಗೌಡ ರಸ್ತೆ , ಮೈಕೋ ರಸ್ತೆ ಹಾಗೂ ಡೇರಿ ಸರ್ಕಲ್ ಕೂಡುವ ರಸ್ತೆಯಲ್ಲಿರುವುದರಿಂದ ನಗರದ ಪ್ರಮುಖ ವಾಣಿಜ್ಯ ಸ್ಥಳಗಳಾದ ಎಂ.ಜಿ.ರಸ್ತೆ , ಬ್ರಿಗೇಡ್ ರಸ್ತೆ , ಕಮರ್ಷಿಯಲ್ ಸ್ಟ್ರೀಟ್ , ಅವೆನ್ಯೂ ರಸ್ತೆ, ಮಾರ್ಕೆಟ್ , ಗಾಂಧಿ ಬಜಾರ್  ಹಾಗೂ ಜಯನಗರ ಮುಂತಾದವುಗಳು ೬ ರಿಂದ ೮ ಕಿ.ಮೀ ವ್ಯಾಪ್ತಿಯೊಳಗೆ ಬರುತ್ತವೆ.

ಸಂಸ್ಥೆಯ ಪರಿಸರವು ಶಾಂತ ವಾತಾವರಣದಿಂದ ಕೂಡಿದ್ದು, ಕಲಿಕೆಯ ಪ್ರಕ್ರಿಯೆಗೆ ಹಾಗೂ ಕಚೇರಿಯ ಸಭೆಗಳಿಗೆ ಸೂಕ್ತ ಸ್ಥಳವಾಗಿದೆ.


ಹಾಲು ಉತ್ಪಾದಕರ ಸಹಕಾರಿ ಸಂಘಗಳ ಸಿಬ್ಬಂದಿ ಹಾಗೂ ಸದಸ್ಯರಿಗೆ ತರಬೇತಿ ನೀಡುವ ನಮ್ರಧ್ಯೇಯದೊಂದಿಗೆ ತರಬೇತಿ ಸಂಸ್ಥೆಯನ್ನು ಪ್ರಾರಂಭಿಸಲಾಯಿತು.ಮಹಾಮಂಡಳಿಯ ಬದಲಾಗುತ್ತಿರುವ ಅವಶ್ಯಕತೆಗಳಿಗನುಗುಣವಾಗಿ ತರಬೇತಿ ಸಂಸ್ಥೆಯು ಮಾನವ ಸಂಪನ್ಮೂಲ ಅಭಿವೃದ್ಧಿಯತ್ತ ಸಹ ತನ್ನ ಗಮನವನ್ನು ಹರಿಸಿದೆ.

ತರಬೇತಿ ಕಾರ್ಯಕ್ರಮಗಳ ಒಂದು ಪಾರ್ಶ್ವನೋಟ

ತರಬೇತಿ ಸಂಸ್ಥೆಯಲ್ಲಿ ಕೈಗೊಳ್ಳಲಾಗಿರುವ ತರಬೇತಿ ಕಾರ್ಯಕ್ರಮಗಳನ್ನು ಮುಖ್ಯವಾಗಿ ಮೂರು ಕ್ಷೇತ್ರಗಳಾಗಿ ವಿಂಗಡಿಸಬಹುದಾಗಿದೆಃ-

  • ಹಾಲು ಉತ್ಪಾದಕರ ಸಹಕಾರ ಸಂಘಗಳ ಮಟ್ಟದಲ್ಲಿ ತರಬೇತಿ ಕಾರ್ಯಕ್ರಮಗಳು
  • ಶೇಖರಣೆ ಮತ್ತು ಸೌಲಭ್ಯ
  • ಮಾನವ ಸಂಪನ್ಮೂಲ ಅಭಿವೃದ್ಧಿ

ಹಾಲು ಉತ್ಪಾದಕರ ಸಹಕಾರ ಸಂಘಗಳ ಮಟ್ಟದಲ್ಲಿ ತರಬೇತಿ ಕಾರ್ಯಕ್ರಮಗಳು

ಹಾಲು ಉತ್ಪಾದಕರ ಸಹಕಾರ ಸಂಘಗಳ ಸಿಬ್ಬಂದಿವರ್ಗಕ್ಕೆ ರೂಪಿಸಿರುವ ತರಬೇತಿ ಕಾರ್ಯಕ್ರಮಗಳು ಹೀಗಿವೆಃ

  • ಆಡಳಿತ ಮಂಡಳಿ ಸದಸ್ಯರಿಗೆ ತರಬೇತಿ - 3 ದಿನಗಳು
  • ಕಾರ್ಯದರ್ಶಿಗಳಿಗೆ ತರಬೇತಿ - 20 ದಿನಗಳು
  • ಹೈನುರಾಸುಗಳ ನಿರ್ವಹಣೆ  - 3 ದಿನಗಳು
  • ಶುದ್ಧ ಹಾಲು ಉತ್ಪಾದನೆ  - 3 ದಿನಗಳು
  • ಪ್ರಥಮ ಚಿಕಿತ್ಸೆ  ದಿನಗಳು  - 6 ದಿನಗಳು
  • ಕೃತಕ ಗರ್ಭಧಾರಣೆ ಸಮೂಹ  AI ಒಳಗೊಂಡಂತೆ - 30 ದಿನಗಳು
  • ಬಲ್ಕ್ ಮಿಲ್ಕ್ ಕೂಲರ್(BMC) ಮತ್ತು ಸ್ವಯಂಚಾಲಿತ ಹಾಲು ಶೇಖರಣಾ ಕೇಂದ್ರಗಳು(AMCU)  - 6 ದಿನಗಳು

ಶೇಖರಣೆ ಮತ್ತು ಸೌಲಭ್ಯ

ಹಾಲು ಉತ್ಪಾದಕರ ಸಹಕಾರ ಸಂಘಗಳನ್ನು ಮೇಲ್ವಿಚಾರಣೆ ಮಾಡುವ ನಿಟ್ಟಿನಲ್ಲಿ ವಿಸ್ತರಣಾ ಅಧಿಕಾರಿಗಳಿಗೆ ತರಬೇತಿ ನೀಡಲಾಗುವುದು. ಈ ತರಬೇತಿ ಕಾರ್ಯಕ್ರಮವು ಹಾಲು ಸಂಘಗಳ ಲೆಕ್ಕಪತ್ರಗಳ ನಿರ್ವಹಣೆ, ನಿಯತಕಾಲಿಕ ಪರಿಶೀಲನಾ ಸಭೆಗಳನ್ನು ನಡೆಸುವುದು, ಹಾಲಿನ ಗುಣಮಟ್ಟದ ಪರೀಕ್ಷೆ, ಹೈನುರಾಸುಗಳ ಆರೋಗ್ಯಪಾಲನೆ ಮತ್ತು ಪೋಷಣೆ, ಶುದ್ಧ ಹಾಲು ಉತ್ಪಾದನೆ ಮತ್ತು ಹಾಲು ಉತ್ಪಾದಕರ ಸಂಘಗಳನ್ನು ಲಾಭಯುತವಾಗಿ ಮುನ್ನಡೆಸಲು ಅವಶ್ಯವಿರುವ ಅತ್ಯುತ್ತಮವಾದ ನಿರ್ವಹಣಾ ಪದ್ಧತಿಗಳು, ಇವೇ ಮೊದಲಾದ ವಿಷಯಗಳನ್ನು ಒಳಗೊಂಡಿರುತ್ತವೆ.

ಮಾನವ ಸಂಪನ್ಮೂಲ ಅಭಿವೃದ್ಧಿ

ಹಾಲು ಒಕ್ಕೂಟಗಳ ವಿವಿಧ ಕಾರ್ಯಕ್ಷೇತ್ರಗಳನ್ನು ನಿರ್ವಹಿಸುವ ಉದ್ಯೋಗಿಗಳು ಮತ್ತು ಅಧಿಕಾರಿಗಳಿಗೆ ತರಬೇತಿಗಳನ್ನು ರೂಪಿಸಲಾಗಿದೆ. ಬಹುಮುಖ್ಯವಾದ ಕ್ಷೇತ್ರಗಳಾದ ಹಣಕಾಸು, ಮಾರುಕಟ್ಟೆ, ಉತ್ಪಾದನೆ ಮತ್ತು ಕಾರ್ಯಾಚರಣೆ ನಿರ್ವಹಣೆ, ಸಾಮಾನ್ಯ ನಿರ್ವಹಣಾ ಕಾರ್ಯಕ್ರಮಗಳು, ಡೇರಿ ಘಟಕಗಳಿಗೆ ತಕ್ಕುದಾದ ಡೇರಿ ಸ್ಥಾವರ ಮತ್ತು ಯಂತ್ರೋಪಕರಣಗಳು ಹಾಗೂ ಶೈತ್ತೀಕರಣ ವ್ಯವಸ್ಥೆಗಳ ನಿರ್ವಹಣೆಗೆ ಸಂಬಂಧಿಸಿದ ನಿರ್ದಿಷ್ಟವಾದ ತಾಂತ್ರಿಕ ತರಬೇತಿ ಕಾರ್ಯಕ್ರಮಗಳು, ಇಂಧನ ಉಳಿತಾಯ, ಗುಣಮಟ್ಟ ನಿರ್ವಹಣೆ, ಆಹಾರ ಸುರಕ್ಷತಾ ಮಾನದಂಡಗಳು, ಹೈನುರಾಸುಗಳ ಆರೋಗ್ಯ ಮತ್ತು ಪೌಷ್ಠಿಕತೆ ಕ್ಷೇತ್ರಗಳಲ್ಲಿ ಆಗಿರುವ ಇತ್ತೀಚಿನ ಬೆಳವಣಿಗೆಗಳು, ಇವೇ ಮುಂತಾದ ವಿಷಯಗಳಲ್ಲಿ ತರಬೇತಿ ಕಾರ್ಯಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ.

ಆಹ್ವಾನಿತ ಪರಿಣಿತರಿಂದ ಉಪನ್ಯಾಸಗಳು ಮತ್ತು ಅಗತ್ಯತೆಗೆ ಅನುಗುಣವಾಗಿ ಕಾರ್ಯಾಗಾರಗಳನ್ನು ನಿರಂತರವಾಗಿ ಸಂಯೋಜಿಸಲಾಗುತ್ತಿದೆ.

ಸೌಲಭ್ಯಗಳು

  • ಸಭಾಂಗಣ: ತರಬೇತಿ ಸಂಸ್ಥೆಯಲ್ಲಿ ಎರಡು ವಿಶಾಲವಾದ ಸಭಾಂಗಣಗಳಿವೆ.ಒಂದೊಂದರಲ್ಲಿ ಐವತ್ತು ಮಂದಿ ಅಭ್ಯರ್ಥಿಗಳಿಗೆ ಸ್ಥಳಾವಕಾಶವಿದೆ.ಈ ಸಭಾಂಗಣಗಳಲ್ಲಿ ಶ್ರವಣ-ದೃಶ್ಯ (Audio-visual) ಸಾಧನಗಳು ಮತ್ತು ಪ್ರಕ್ಷೇಪಕ (Projector) ಗಳನ್ನು ಅಳವಡಿಸಲಾಗಿದೆ.

  • ವಸತಿ: ಈ ತರಬೇತಿ ಸಂಸ್ಥೆಯಲ್ಲಿ ಉತ್ತಮವಾದ ವಸತಿ ನಿಲಯದ ವ್ಯವಸ್ಥೆಯನ್ನು ಮಾಡಲಾಗಿದೆ.

  • ಉಪಹಾರ ಗೃಹ: ವಸತಿಗೃಹದಲ್ಲಿ ತಂಗಿರುವ ಅಭ್ಯರ್ಥಿಗಳಿಗೆ ಮೀಸಲಾಗಿರುವ ಒಂದು ಸುಸಜ್ಜಿತ ಉಪಹಾರ ಗೃಹವೂ ಸಹ ಕಾರ್ಯ ನಿರ್ವಹಿಸುತ್ತಲಿದೆ.

  • ಸಾರಿಗೆ ವ್ಯವಸ್ಥೆ: ತರಬೇತಿಗಾಗಿ ಬಂದಿರುವ ಶಿಕ್ಷಾರ್ಥಿಗಳಿಗೆ ಅರಿವು ಮೂಡಿಸುವ ಸಲುವಾಗಿ ಹಾಗೂ ತರಬೇತಿಗಾಗಿ ವಿವಿಧ ಸಂಸ್ಥೆಗಳಿಗೆ ಭೇಟಿ ನೀಡಲು ಅನುವಾಗುವಂತೆ ತರಬೇತಿ ಸಂಸ್ಥೆಯು ಒಂದು ವಾಹನವನ್ನು(Bus) ಹೊಂದಿದೆ.

  • ಗ್ರಂಥಾಲಯ ಮತ್ತು ಗಣಕಯಂತ್ರ: ಈ ತರಬೇತಿ ಸಂಸ್ಥೆಯು ಚೆನ್ನಾಗಿ ಸಂಗ್ರಹಿಸಿರುವ ಒಂದು ಗ್ರಂಥಾಲಯವಲ್ಲದೆ ಒಂದು ಗಣಕಯಂತ್ರಗಳ ಲ್ಯಾಬ್ ಅನ್ನು (Computer Lab) ಹೊಂದಿದೆ.

   ತರಬೇತಿ ಸಂಸ್ಥೆಯ ಸೌಲಭ್ಯಗಳನ್ನು ಇತರೆ ಸಂಸ್ಥೆಗಳಿಗೆ ಮತ್ತು ಸರ್ಕಾರಿ ಇಲಾಖೆಗಳಿಗೆ ಒದಗಿಸುವ ಸಾಧ್ಯತೆಃ

ಸುಮಾರು ವರ್ಷಗಳಿಂದ ಗಳಿಸಿಕೊಂಡಿರುವ ಅನುಭವ ಹಾಗೂ ಪರಿಣತಿಯು ನಮ್ಮನ್ನು ಮತ್ತೊಂದು ಹೆಜ್ಜೆ ಮುಂದೆ ಹೋಗಿ, ತರಬೇತಿ ಸಂಸ್ಥೆಯಲ್ಲಿ ಮತ್ತು ವಸತಿಗೃಹದಲ್ಲಿ  ಲಭ್ಯವಿರುವ ಸೌಲಭ್ಯಗಳನ್ನು, ತಮ್ಮ ಉದ್ಯೋಗಿಗಳು/ಅಧಿಕಾರಿಗಳಿಗೆ ತರಬೇತಿ ನೀಡಲಿಚ್ಛಿಸುವ ಹಾಗೂ ಅಧಿಕೃತ ಸಭೆಗಳನ್ನು ನಡೆಸಬಯಸುವ ಇತರೆ ಸಂಸ್ಥೆಗಳು, ಸರ್ಕಾರಿ ಇಲಾಖೆಗಳು ಹಾಗೂ ಬ್ಯಾಂಕುಗಳಿಗೆ ನೀಡುವಂತೆ ಉತ್ತೇಜಿಸಿದೆ.

ಸಂಪರ್ಕಿಸಿಃ

ನಿರ್ದೇಶಕರು (ತರಬೇತಿ)
ಕೇಂದ್ರೀಯ ತರಬೇತಿ ಸಂಸ್ಥೆ
ಕಹಾಮ ಸಂಕೀರ್ಣ
ಡಾಃ ಎಂ.ಹೆಚ್.ಮರೀಗೌಡ ರಸ್ತೆ
ಡಿ.ಆರ್.ಕಾಲೇಜು ಅಂಚೆ
ಬೆಂಗಳೂರು – 560 029

ದೂರವಾಣಿಃ 080-25536148

ವಿಳಾಸ

ಕರ್ನಾಟಕ ಸಹಕಾರಿ ಹಾಲು ಉತ್ಪಾದಕರ ಮಹಾಮಂಡಳಿ ನಿಯಮಿತ .
ಕಹಾಮ ಸಂಕೀರ್ಣ, ಅಂಚೆ ಪೆಟ್ಟಿಗೆ ಸಂಖ್ಯೆ- 2915,
ಡಿ. ಆರ್. ಕಾಲೇಜು ಅಂಚೆ, ಡಾ.ಎಂ.ಹೆಚ್.ಮರಿಗೌಡ ರಸ್ತೆ,
ಬೆಂಗಳೂರು-560029, ಕರ್ನಾಟಕ.

ದೂರವಾಣಿ

080-260 96800

ಸಹಾಯವಾಣಿ:

1800 425 8030 toll free 10.00AM - 5.30PM

(ಎರಡನೇ ಶನಿವಾರ, ನಾಲ್ಕನೇ ಶನಿವಾರ, ಭಾನುವಾರ ಹಾಗು ಇತರೆ ರಾಜ್ಯ ಸರ್ಕಾರ ರಜಾ ದಿನಗಳನ್ನು ಹೊರತು ಪಡಿಸಿ)

ನಂದಿನಿ ನೆರವು ದೂರವಾಣಿ ಸಂಖ್ಯೆ (24*7):

080-66660000

ಫಾಕ್ಸ್:: 080-255 36105