1800 425 8030 ಟೋಲ್ ಫ್ರೀ 10.00AM - 5.30PM
ಎರಡನೇ ಶನಿವಾರ, ಭಾನುವಾರ ಹಾಗೂ ಸರ್ಕಾರಿ ರಜಾ ದಿನಗಳನ್ನು ಹೊರತುಪಡಿಸಿ

ಧಾರವಾಡ ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ನಿಯಮಿತ

ಧಾರವಾಡ, ಹಾವೇರಿ, ಗದಗ ಮತ್ತು ಉತ್ತರ ಕನ್ನಡ ಜಿಲ್ಲೆಗಳನ್ನು ಒಳಗೊಂಡಿರುವ ಈ ಹಾಲು ಒಕ್ಕೂಟವು 28 ತಾಲ್ಲೂಕುಗಳ ವ್ಯಾಪ್ತಿಪ್ರದೇಶದಲ್ಲಿ ಕಾರ್ಯಾಚರಣೆಯಲ್ಲಿರುವ 995 ಹಾಲು ಉತ್ಪಾದಕರ ಸಹಕಾರ ಸಂಘಗಳನ್ನು ಹೊಂದಿದೆ.  ಈ ಹಾಲು ಒಕ್ಕೂಟವು ಪ್ರತಿನಿತ್ಯ 2.10 ಲಕ್ಷ ಹಾಲಿನ ಸಂಸ್ಕರಣೆ ಹಾಗೂ 10.00 ಟನ್ ಹಾಲಿನ ಪುಡಿ, 9.00 ಟನ್ ಬೆಣ್ಣೆ ಮತ್ತು 4.00 ಟನ್ ತುಪ್ಪ ತಯಾರಿಸುವ ಸಾಮರ್ಥ್ಯವುಳ್ಳ ಮೂಲಭೂತ ಸೌಕರ್ಯವನ್ನು ಹೊಂದಿದೆ.

ಹಾವೇರಿಯಲ್ಲಿ 20ಸಾವಿರ ​ಲೀಟರ್, ಹಿರೇಕೆರೂರಿನಲ್ಲಿ 20ಸಾವಿರ ಲೀಟರ್, ಗದಗ (ಮಲ್ಲಸಂದ್ರ) ದಲ್ಲಿ 20ಸಾವಿರ ಲೀಟರ್, ಸಿರಸಿಯಲ್ಲಿ 20ಸಾವಿರ ಲೀಟರ್, ರೋಣದಲ್ಲಿ 10ಸಾವಿರ ಲೀಟರ್ ಮತ್ತು ಕುಮುಟಾದಲ್ಲಿ 2ಸಾವಿರ ಲೀಟರ್ ಸಾಮರ್ಥ್ಯಗಳ ಶೀತಲಕೇಂದ್ರಗಳನ್ನು ಹೊಂದಿದ್ದು, ಒಟ್ಟಾರೆ 92ಸಾವಿರ ಲೀಟರ್ ಹಾಲನ್ನು ಶೀತಲೀಕರಿಸುವ ಸಾಮರ್ಥ್ಯವನ್ನು ಹೊಂದಿದೆ.  ಅಲ್ಲದೆ, ಒಕ್ಕೂಟದಲ್ಲಿ 43 ಬಲ್ಕ್ ಮಿಲ್ಕ್ ಕೂಲರ್ ಮತ್ತು 386 ಸ್ವಯಂಚಾಲಿತ ಹಾಲು ಶೇಖರಣೆ ಕೇಂದ್ರಗಳು ಕಾರ್ಯಾಚರಣೆಯಲ್ಲಿವೆ.

ಈ ಒಕ್ಕೂಟವು ಪ್ರತಿನಿತ್ಯ ಸರಾಸರಿ 2.33 ಲಕ್ಷ ಕೇಜಿ ಹಾಲನ್ನು ಶೇಖರಣೆ ಮಾಡುತ್ತಲಿದ್ದು, ಸರಾಸರಿ 0.95 ಲಕ್ಷ ಲೀಟರ್ ಹಾಲನ್ನು ಮಾರಾಟ ಮಾಡುತ್ತಿದೆ ಮತ್ತು 0.09 ಲಕ್ಷ ಕೇಜಿ ಮೊಸರನ್ನು ಮಾರಾಟ ಮಾಡುತ್ತಿದೆ. 

ಒಕ್ಕೂಟದ ಹಿರಿಮೆ:    ಅತ್ಯಂತ ಉತ್ಕೃಷ್ಟ ಗುಣಮಟ್ಟದ ಧಾರವಾಡ ಪೇಡ, ಕುಡುಕೆ ಮೊಸರು (ಮಣ್ಣಿನ ಮಡಕೆಗಳಲ್ಲಿ ಗಟ್ಟಿ ಮೊಸರು) ಮತ್ತು 10 ಗ್ರಾಂನ ಬೆಣ್ಣೆಗೆ (ಚಿಪ್‍ಲೆಟ್ಸ್) ಹೆಸರುವಾಸಿಯಾಗಿದೆ.

 

ಧಾರವಾಡ ಜಿಲ್ಲಾ ಹಾಲು ಉತ್ಪಾದಕರ ಸಹಕಾರ ಸಂಘ ನಿಯಮಿತ,
ಉತ್ಪನ್ನ ಡೇರಿ, ವಿದ್ಯಾಗಿರಿ ಅಂಚೆ,
ಲಕ್ಕಮ್ಮನಹಳ್ಳಿ ಕೈಗಾರಿಕಾ ಪ್ರದೇಶ,  ಧಾರವಾಡ- 580 004,ಕರ್ನಾಟಕ.
ಫೋನ್: 0836-2467603 / 2468380 / 2467643
ಫ್ಯಾಕ್ಸ್: 0836-2468268
ಇ-ಮೈಲ್:[email protected] , [email protected]

Read more

ವಿಳಾಸ

ಕರ್ನಾಟಕ ಸಹಕಾರಿ ಹಾಲು ಉತ್ಪಾದಕರ ಮಹಾಮಂಡಳಿ ನಿಯಮಿತ .
ಕಹಾಮ ಸಂಕೀರ್ಣ, ಅಂಚೆ ಪೆಟ್ಟಿಗೆ ಸಂಖ್ಯೆ- 2915,
ಡಿ. ಆರ್. ಕಾಲೇಜು ಅಂಚೆ, ಡಾ.ಎಂ.ಹೆಚ್.ಮರಿಗೌಡ ರಸ್ತೆ,
ಬೆಂಗಳೂರು-560029, ಕರ್ನಾಟಕ.

ದೂರವಾಣಿ

080-260 96800

ಸಹಾಯವಾಣಿ:

1800 425 8030 toll free 10.00AM - 5.30PM

(ಎರಡನೇ ಶನಿವಾರ, ನಾಲ್ಕನೇ ಶನಿವಾರ, ಭಾನುವಾರ ಹಾಗು ಇತರೆ ರಾಜ್ಯ ಸರ್ಕಾರ ರಜಾ ದಿನಗಳನ್ನು ಹೊರತು ಪಡಿಸಿ)

ನಂದಿನಿ ನೆರವು ದೂರವಾಣಿ ಸಂಖ್ಯೆ (24*7):

080-66660000

ಫಾಕ್ಸ್:: 080-255 36105