ನಂದಿನಿ ಪ್ಯಾಕೇಜಿಂಗ್ ಫಿಲಂ ಪ್ಲಾಂಟ್

ಖಾಸಗಿ ಸಂಸ್ಥೆಗಳಿಂದ ಹಾಲನ್ನು ಪ್ಯಾಕ್ ಮಾಡಲು ಬೇಕಾದ ಫಿಲಂನ ಸರಬರಾಜು, ಗುಣಮಟ್ಟದಲ್ಲಿನ ಏರು ಪೇರುಗಳನ್ನು ಕನಿಷ್ಠ ಪ್ರಮಾಣಕ್ಕೆ ಇಳಿಸುವ ನಿಟ್ಟಿನಲ್ಲಿ, ಹಾಗೂ ಸುಧಾರಿತ ದಕ್ಷತೆ ಮತ್ತು ಉಳಿತಾಯವನ್ನು ಸಾಧಿಸುವ ಹಿನ್ನೆಲೆಯಲ್ಲಿ 1995-96ರಲ್ಲಿ ಪೌಚ್ ಫಿಲಂ ಘಟಕವನ್ನು ಸ್ಥಾಪಿಸಲು ಕರ್ನಾಟಕ ಹಾಲು ಮಹಾಮಂಡಳಿಯು ನಿರ್ಧರಿಸಿತು.

ಪ್ರಸ್ತುತ ಘಟಕವು ಮಾಹೆಯಾನ 300 ಮೇಟ್ರಿಕ್ ಟನ್ LDPE-LLDPE ಮಿಶ್ರಿತ ಪಾಲಿ ಫಿಲಂ ಅನ್ನು ವಿವಿಧ ಬಗೆಯ ಪೌಚ್ ಫಿಲಂ ಉತ್ಪಾದಿಸುತ್ತಿದ್ದು ಕಹಾಮ ಒಟ್ಟಾರೆ ಬೇಡಿಕೆಯ ಸುಮಾರು 38% ಪೌಚ್ ಫಿಲಂನ್ನು ಪೂರೈಸುತ್ತಿದೆ.  ಮುಂಬರುವ ದಿನಗಳಲ್ಲಿ ಘಟಕದ ಮಾಹೆಯಾನ ಉತ್ಪಾದನಾ ಸಾಮರ್ಥ್ಯವನ್ನು 500 ಮೆಟ್ರಿಕ್ ಟನ್ಗೆ ಏರಿಸಲು ಕ್ರಮವಿಡಲಾಗುತ್ತಿದೆ.

ಈ ಪೌಚ್ ಫಿಲಂ ಘಟಕವು ಬೆಂಗಳೂರಿನಲ್ಲಿರುವ ಹೆಚ್.ಎ.ಎಲ್ ರಸ್ತೆಯ ಮಾರತ್ ಹಳ್ಳಿಯಲ್ಲಿಯ ಮುನ್ನೇಕೊಳಾಲದಲ್ಲಿ ಸ್ಥಾಪಿತಗೊಂಡಿದೆ.

ವಿಳಾಸ

ಕರ್ನಾಟಕ ಸಹಕಾರಿ ಹಾಲು ಉತ್ಪಾದಕರ ಮಹಾಮಂಡಳಿ ನಿಯಮಿತ .
ಕಹಾಮ ಸಂಕೀರ್ಣ, ಅಂಚೆ ಪೆಟ್ಟಿಗೆ ಸಂಖ್ಯೆ- 2915,
ಡಿ. ಆರ್. ಕಾಲೇಜು ಅಂಚೆ, ಡಾ.ಎಂ.ಹೆಚ್.ಮರಿಗೌಡ ರಸ್ತೆ,
ಬೆಂಗಳೂರು-560029, ಕರ್ನಾಟಕ.

ದೂರವಾಣಿ

080-260 96800

ಸಹಾಯವಾಣಿ:

1800 425 8030 toll free 10.00AM - 5.30PM

(ಎರಡನೇ ಶನಿವಾರ, ನಾಲ್ಕನೇ ಶನಿವಾರ, ಭಾನುವಾರ ಹಾಗು ಇತರೆ ರಾಜ್ಯ ಸರ್ಕಾರ ರಜಾ ದಿನಗಳನ್ನು ಹೊರತು ಪಡಿಸಿ)

ನಂದಿನಿ ನೆರವು ದೂರವಾಣಿ ಸಂಖ್ಯೆ (24*7):

080-66660000

ಫಾಕ್ಸ್:: 080-255 36105