1800 425 8030 ಟೋಲ್ ಫ್ರೀ 10.00AM - 5.30PM
ಎರಡನೇ ಶನಿವಾರ, ಭಾನುವಾರ ಹಾಗೂ ಸರ್ಕಾರಿ ರಜಾ ದಿನಗಳನ್ನು ಹೊರತುಪಡಿಸಿ

ಐಸ್ ಕ್ರೀಂ ಘಟಕ, ಬಳ್ಳಾರಿ

ಉತ್ತರ ಕರ್ನಾಟಕದ ಪ್ರದೇಶಗಳಲ್ಲಿ ನಂದಿನಿ ಐಸ್ ಕ್ರೀಂನ ಹೆಚ್ಚುತ್ತಿರುವ ಬೇಡಿಕೆಯನ್ನು ಪೂರೈಸಲು ಅನುವಾಗುವಂತೆ 10,000ಲೀಟರ್ ಉತ್ಪಾದನಾ ಸಾಮರ್ಥ್ಯದ ಬಳ್ಳಾರಿ ಐಸ್ ಕ್ರೀಂ ಘಟಕವನ್ನು ಸೆಪ್ಟೆಂಬರ್ 2013ರಲ್ಲಿ ಬಳ್ಳಾರಿ-ರಾಯಚೂರು-ಕೊಪ್ಪಳ ಜಿಲ್ಲಾ ಸಹಕಾರಿ ಹಾಲು ಒಕ್ಕೂಟದ ಆವರಣದಲ್ಲಿ ಸ್ಥಾಪಿಸಲಾಯಿತು. ಪ್ರಸ್ತುತದಲ್ಲಿ, ನಂದಿನಿ ಐಸ್ ಕ್ರೀಂನ ಉತ್ಪಾದನೆಯ ಜೊತೆಯಲ್ಲಿಯೆ ಗುಜರಾತ್ ಸಹಕಾರಿ ಹಾಲು ಮಾರಾಟ ಮಹಾಮಂಡಳಿಗಾಗಿ ‘ಅಮುಲ್’ ಬ್ರಾಂಡಿನ ಐಸ್ ಕ್ರೀಂನ co-packing  ಅನ್ನು ಸಹ ಕೈಗೊಳ್ಳಲಾಗಿದೆ.

ನಂದಿನಿಯು ಮಾರುಕಟ್ಟೆಯನ್ನು ತನ್ನ ಪ್ರಾದೇಶಿಕ ಮಾರಾಟ ಕ್ಷೇತ್ರದೆಲ್ಲೆಡೆ ಈಗ ತನ್ನ ಕಾರ್ಯಕ್ಷೇತ್ರವನ್ನು ಹೊರ ರಾಜ್ಯಗಳಿಗೂ ಸಹ ವಿಸ್ತರಿಸುತ್ತಲಿದೆ.

ಪ್ರಸ್ತುತದಲ್ಲಿ ಲಭ್ಯವಿರುವ ಮೂಲಭೂತ ಸೌಕರ್ಯಗಳ ಜೊತೆಗೆ ಹೊಸದಾಗಿ ಸೇರ್ಪಡೆಯಾಗಿರುವ ಈ ಘಟಕದ ಸ್ಥಾಪನೆಯಿಂದ ಸಂಸ್ಥೆಯು ನೆರೆರಾಜ್ಯಗಳಲ್ಲಿನ ಮಾರುಕಟ್ಟೆಯನ್ನು ಪ್ರವೇಶ ಮಾಡಲು ಸಾಧ್ಯವಾಗಿದೆ. ಈ ಹೊಸ ಮಾರಾಟ ಕ್ಷೇತ್ರಗಳಲ್ಲಿ ನಂದಿನಿಯು ನಿಸ್ಸಂದೇಹವಾಗಿ ತನ್ನ ಬ್ರ್ಯಾಂಡಿನ ಸಮಪಾಲನ್ನು ತನ್ನದಾಗಿಸಿಕೊಳ್ಳುವ ಭರವಸೆಯನ್ನು ಹೊಂದಿದೆ. ಈ ಘಟಕದಲ್ಲಿ ತಯಾರಾಗುವ ನವನವೀನ ಹಾಗೂ ವಿವಿಧ ರೀತಿಯ ಐಸ್ ಕ್ರೀಂಗಳು ಪ್ರಮುಖ ಗ್ರಾಹಕರುಗಳಾದ ಮಕ್ಕಳು ಹಾಗೂ ಯುವಪೀಳಿಗೆಯನ್ನು ರಂಜಿಸುವಲ್ಲಿ ಯಶಸ್ವಿಯಾಗುವುದು ನಿಶ್ಚಿತ.

ಮುಂಬರುವ ದಿನಗಳಲ್ಲಿ ನಂದಿನಿಯು ಒಂದು ರಾಷ್ಟ್ರಮಟ್ಟದ ಬ್ರ್ಯಾಂಡ್ ಆಗುವ ದೂರದೃಷ್ಟಿಯನ್ನು ಹೊಂದಿದೆ.

ಬಳ್ಳಾರಿ ಐಸ್ ಕ್ರೀಂ ಘಟಕದ ಗುಣಮಟ್ಟದ ಕಾರ್ಯನೀತಿ :-

ತನ್ನ ಲಕ್ಷ್ಯದಲ್ಲಿರುವ ಐಸ್ ಕ್ರೀಂ ಮಾರುಕಟ್ಟೆಯ ಅಗತ್ಯತೆಗಳನ್ನು ಖಚಿತಪಡಿಸಿಕೊಳ್ಳುವುದೇ ಅಲ್ಲದೆ, ಐಸ್ ಕ್ರೀಂನ ಮಾರುಕಟ್ಟೆಯ ಪಾಲನ್ನು ಹೆಚ್ಚಿಸಿಕೊಳ್ಳಲು ಅನುವಾಗುವಂತೆ ನಿರಂತರವಾಗಿ ಗ್ರಾಹಕರ ಮೆಚ್ಚುಗೆಯನ್ನು ಗರಿಷ್ಠ ಮಟ್ಟಕ್ಕೆ ಕೊಂಡೊಯ್ಯುವುದೇ ಸಂಸ್ಥೆಯ ಗುಣಮಟ್ಟದ ಕಾರ್ಯನೀತಿಯಾಗಿದೆ.

ಮಹಾಮಂಡಳಿಯ ಉದ್ಯೋಗಿಗಳಿಗೆ ತರಬೇತಿಯನ್ನು ನೀಡುವ ಮೂಲಕ ಗುಣಮಟ್ಟ ನಿರ್ವಹಣಾ ವ್ಯವಸ್ಥೆ, ಉತ್ಪನ್ನದ ಗುಣಮಟ್ಟ ಹಾಗೂ ಮಾರಾಟ ನೈಪುಣ್ಯತೆಗಳನ್ನು ನಿರಂತರವಾಗಿ ಉತ್ತಮಗೊಳಿಸಲಾಗುತ್ತಲಿದೆ.

ಐಸ್ ಕ್ರೀಂನ ಗುಣಮಟ್ಟ ನಿರ್ವಹಣೆಗೆ ಆದ್ಯತೆಯನ್ನು ನೀಡಲಾಗುತ್ತಿದ್ದು ಐಸ್ ಕ್ರೀಂನ ತಯಾರಿಕೆಗೆ ಅತ್ಯಂತ ಆರೋಗ್ಯಕರ ವಾತಾವರಣದಲ್ಲಿ ತಯಾರಿಕೆಯೊಂದಿಗೆ ಕಚ್ಚಾ ಸಾಮಗ್ರಿಗಳನ್ನು ಪಡೆಯುವ ಹಂತದಿಂದ ಪ್ಯಾಕಿಂಗಿನವರೆಗೆ, ಅಂತಿಮವಾಗಿ ಉತ್ಪನ್ನಗಳನ್ನು ಗ್ರಾಹಕರಿಗೆ ತಲುಪಿಸುವವರೆಗೆ ಗುಣಮಟ್ಟವನ್ನು ಕಾಪಾಡಲಾಗುತ್ತಿದೆ.

 

ನಮ್ಮನ್ನು ಸಂಪರ್ಕಿಸಿ:

ನಂದಿನಿ ಐಸ್-ಕ್ರೀಮ್ ಪ್ಲಾಂಟ್, ಕಹಾಮ  ಘಟಕ. 
ಅಗ್ನಿ ಶಾಮಕ  ಠಾಣೆಯ ಹತ್ತಿರ, ಎಸ್.ಜಿ. ನಗರ 
ಬಳ್ಳಾರಿ-583104, ಕರ್ನಾಟಕ 
ಫೋನ್:08392-267526
ಮೊಬೈಲ್:9591994387

ವಿಳಾಸ

ಕರ್ನಾಟಕ ಸಹಕಾರಿ ಹಾಲು ಉತ್ಪಾದಕರ ಮಹಾಮಂಡಳಿ ನಿಯಮಿತ .
ಕಹಾಮ ಸಂಕೀರ್ಣ, ಅಂಚೆ ಪೆಟ್ಟಿಗೆ ಸಂಖ್ಯೆ- 2915,
ಡಿ. ಆರ್. ಕಾಲೇಜು ಅಂಚೆ, ಡಾ.ಎಂ.ಹೆಚ್.ಮರಿಗೌಡ ರಸ್ತೆ,
ಬೆಂಗಳೂರು-560029, ಕರ್ನಾಟಕ.

ದೂರವಾಣಿ

080-260 96800

ಸಹಾಯವಾಣಿ:

1800 425 8030 toll free 10.00AM - 5.30PM

(ಎರಡನೇ ಶನಿವಾರ, ನಾಲ್ಕನೇ ಶನಿವಾರ, ಭಾನುವಾರ ಹಾಗು ಇತರೆ ರಾಜ್ಯ ಸರ್ಕಾರ ರಜಾ ದಿನಗಳನ್ನು ಹೊರತು ಪಡಿಸಿ)

ನಂದಿನಿ ನೆರವು ದೂರವಾಣಿ ಸಂಖ್ಯೆ (24*7):

080-66660000

ಫಾಕ್ಸ್:: 080-255 36105