ಕರ್ನಾಟಕ ರಾಜ್ಯದ ಹೈನುಗಾರರಿಂದ ಯಶಸ್ವಿಯಾಗಿ ನಿರ್ವಹಣೆಯಾಗುತ್ತಿರುವ ಕರ್ನಾಟಕ ಹಾಲು ಮಹಾಮಂಡಳಿ (ಕಹಾಮ) ಇಡೀ ದಕ್ಷಿಣ ಭಾರತದಲ್ಲಿನ ಸಹಕಾರಿ ಹಾಲು ಮಹಾಮಂಡಳಿಗಳಲ್ಲಿ ಅಗ್ರಸ್ಥಾನದಲ್ಲಿರುತ್ತದೆ. ರಾಜ್ಯದ 16 ಜಿಲ್ಲಾ ಸಹಕಾರಿ ಹಾಲು ಒಕ್ಕೂಟಗಳಡಿಯಲ್ಲಿ, ಗ್ರಾಮೀಣ ಮಟ್ಟದಲ್ಲಿ ಕಾರ್ಯಾಚರಣೆಯಲ್ಲಿರುವ 15043ಕ್ಕೂ ಹೆಚ್ಚಿನ ಹಾಲು ಉತ್ಪಾದಕರ ಸಹಕಾರ ಸಂಘಗಳಲ್ಲಿ ಕರ್ನಾಟಕ ಹಾಲು ಮಹಾಮಂಡಳಿಯು 26.38 ಲಕ್ಷ ಹಾಲು ಉತ್ಪಾದಕರನ್ನು ಹೊಂದಿದೆ. ಹೈನು ಅಭಿವೃದ್ಧಿಯ ಮುಖೇನ ಗ್ರಾಮೀಣ ಪ್ರದೇಶಗಳ ಶ್ರೇಯೋಭಿವೃದ್ಧಿಯೇ ಮಹಾಮಂಡಳಿಯ ಧ್ಯೇಯೋದ್ದೇಶವಾಗಿದೆ. ಕಳೆದ ನಾಲ್ಕು ದಶಕಗಳ ಅವಧಿಯಲ್ಲಿನ ಕಹಾಮದ ಸಹಕಾರಿ ಹೈನು ಅಭಿವೃದ್ಧಿ ಕಾರ್ಯಕ್ರಮಗಳಿಂದಾಗಿ ಕರ್ನಾಟಕ ರಾಜ್ಯದ ಹೈನು ಉದ್ಯಮವು ಹಾಲಿನ ಕೊರತೆಯ ಪರಿಸ್ಥಿತಿಯಿಂದ ಪ್ರಗತಿ ಹೊಂದಿ ಸಮೃದ್ಧಿಯ ಸನ್ನಿವೇಶವನ್ನು ತಲುಪಲು ಸಾಧ್ಯವಾಗಿದೆ.
ಕಹಾಮವು ಹಾಲು (ಶೇಖರಣೆ - ಸಂಸ್ಕರಣೆ – ಮಾರುಕಟ್ಟೆ) ಮೂಲಕ ಉತ್ತಮ ಗುಣಮಟ್ಟದ ಹಾಲು ಮತ್ತು ಹಾಲಿನ ಉತ್ಪನ್ನಗಳನ್ನು ಗ್ರಾಹಕರಿಗೆ ಒದಗಿಸಲು ‘ಗೋವಿನಿಂದ ಗ್ರಾಹಕರವರೆಗೆ ಗುಣಮಟ್ಟದ ಶ್ರೇಷ್ಠತೆ’ ಎಂಬ ಧ್ಯೇಯವಾಕ್ಯ ಹೊಂದಿ ನಿರಂತರವಾಗಿ ಈ ನಿಟ್ಟಿನಲ್ಲಿ ಪರಿಶ್ರಮಿಸುತ್ತದೆ. ಸರಿಸಾಟಿಯಿಲ್ಲದ ಉತ್ತಮ ಗುಣಮಟ್ಟದ ಹಾಲು ಮತ್ತು ಹಾಲಿನ ಉತ್ಪನ್ನಗಳನ್ನು ‘ನಂದಿನಿ’ ಬ್ರಾಂಡ್ ಹೆಸರಿನಲ್ಲಿ ಅತ್ಯಂತ ಸ್ಪರ್ಧಾತ್ಮಕ ಬೆಲೆಗಳಲ್ಲಿ ಗ್ರಾಹಕರಿಗೆ ಒದಗಿಸಿ 'ಸಮೃದ್ಧ ಆರೋಗ್ಯವನ್ನು ಹರಡುತ್ತಿದೆ'.
1)ಕರ್ನಾಟಕ ಸಹಕಾರಿ ಹಾಲು ಉತ್ಪಾದಕರ ಮಹಾಮಂಡಳಿಯು (ಕಹಾಮ) ಕರ್ನಾಟಕದಲ್ಲಿನ ಹಾಲು ಉತ್ಪಾದಕರ ಸಹಕಾರ ಸಂಘಗಳನ್ನು ಪ್ರತಿನಿಧಿಸುವ ಶೃಂಗಸಂಸ್ಥೆಯಾಗಿದೆ. ಪ್ರಸ್ತುತದಲ್ಲಿ ಕಹಾಮ ದೇಶದಲ್ಲಿಯೇ ಸಹಕಾರಿ ಹೈನು ಉದ್ಯಮದಲ್ಲಿ ಎರಡನೇ ಸ್ಥಾನದಲ್ಲಿದ್ದು ದಕ್ಷಿಣ ಭಾರತದಲ್ಲಿ ಹಾಲು ಶೇಖರಣೆ ಹಾಗೂ ಮಾರಾಟದಲ್ಲಿ ಮೊದಲ ಸ್ಥಾನದಲ್ಲಿದೆ. ಹಾಲು ಮತ್ತು ಹಾಲಿನ ಉತ್ಪನ್ನಗಳನ್ನು ಮಾರಾಟ ಮಾಡುವುದು ಮಹಾಮಂಡಳಿಯ ಅತ್ಯಂತ ಮುಖ್ಯವಾದ ಕಾರ್ಯಚಟುವಟಿಕೆಯಾಗಿದ್ದು ‘ನಂದಿನಿ’ ಬ್ರಾಂಡ್ ಇಂದು ಪರಿಶುದ್ಧ ಹಾಗೂ ತಾಜಾ ಹಾಲು ಮತ್ತು ಹಾಲಿನ ಉತ್ಪನ್ನಗಳಿಗಾಗಿ ಮನೆ ಮಾತಾಗಿದೆ.
2)ಕರ್ನಾಟಕ ರಾಜ್ಯದಲ್ಲಿ ಕಹಾಮವು 16 ಜಿಲ್ಲಾ ಹಾಲು ಒಕ್ಕೂಟಗಳನ್ನು ಹೊಂದಿದ್ದು, ರಾಜ್ಯದ ಎಲ್ಲಾ ಜಿಲ್ಲೆಗಳನ್ನು ವ್ಯಾಪಿಸಿರುತ್ತದೆ. ಈ ಹಾಲು ಒಕ್ಕೂಟಗಳು ಪ್ರಾಥಮಿಕ ಹಾಲು ಉತ್ಪಾದಕರ ಸಹಕಾರ ಸಂಘಗಳಿಂದ ಹಾಲನ್ನು ಶೇಖರಿಸಿ, ರಾಜ್ಯದ ವಿವಿಧ ಪಟ್ಟಣ / ನಗರ / ಗ್ರಾಮೀಣ ಮಾರುಕಟ್ಟೆಯಲ್ಲಿನ ಗ್ರಾಹಕರಿಗೆ ಸರಬರಾಜು ಮಾಡುತ್ತಿವೆ.
3)ಮೂಲತಃ ಕರ್ನಾಟಕ ಡೇರಿ ಅಭಿವೃದ್ಧಿ ನಿಗಮವು (ಕೆ.ಡಿ.ಡಿ.ಸಿ) 1974ರಲ್ಲಿ ಸ್ಥಾಪನೆ ಹೊಂದಿ ವಿಶ್ವ ಬ್ಯಾಂಕ್ ನೆರವಿನ ಡೇರಿ ಅಭಿವೃದ್ಧಿ ಕಾರ್ಯಕ್ರಮಗಳನ್ನು ಕಾರ್ಯಗತ ಮಾಡುವಲ್ಲಿ ಮೊಟ್ಟ ಮೊದಲ ಸಂಸ್ಥೆಯಾಗಿ ಬೆಳೆದು ಬಂದು,ತದನಂತರ ಅಮೂಲ್ ಮಾದರಿಯ ಹಾಲು ಉತ್ಪಾದಕರ ಸಹಕಾರ ಸಂಘಗಳು ಕರ್ನಾಟಕದಲ್ಲಿ ತಮ್ಮ ಕಾರ್ಯಾಚರಣೆಯನ್ನು ಪ್ರಾರಂಭಿಸಿ ಕ್ಷೀರಧಾರೆ ಯೋಜನೆ II ಮತ್ತು III ಅನುಕ್ರಮವಾಗಿ 1984 ಮತ್ತು 1987ರಲ್ಲಿ ಡೇರಿ ಅಭಿವೃದ್ಧಿ ಚಟುವಟಿಕೆಗಳನ್ನು ರಾಜ್ಯಾದ್ಯಂತ ಹಮ್ಮಿಕೊಂಡು ಪ್ರಸ್ತುತ 15 ಹಾಲು ಒಕ್ಕೂಟಗಳನ್ನು ಸ್ಥಾಪಿಸಿ ರಾಜ್ಯದ ಗ್ರಾಮೀಣ ಆರ್ಥಿಕ ಅಭಿವೃದ್ಧಿಯಲ್ಲಿ ಚುಕ್ಕಾಣಿ ಹಿಡಿಯುವಂತಹ ಪ್ರತಿಷ್ಠಿತ ಸಹಕಾರಿ ಸಂಸ್ಥೆಯಾಗಿ ಯಶಸ್ವಿಯಾಗಿ ಬೆಳೆದಿದೆ. ಸಹಕಾರಿ ಹೈನು ಉದ್ಯಮವು ಮೂರು ಹಂತಗಳಲ್ಲಿ ವಿನ್ಯಾಸಗೊಂಡಿದ್ದು, ಪ್ರಾಥಮಿಕ ಹಂತದಲ್ಲಿ ಹಾಲು ಉತ್ಪಾದಕರ ಸಹಕಾರ ಸಂಘಗಳು,ದ್ವಿತೀಯ ಹಂತದಲ್ಲಿ ಹಾಲು ಶೇಖರಣೆ, ಸಂಸ್ಕರಣೆ ಹಾಗೂ ವ್ಯಾಪ್ತಿ ಕಾರ್ಯಕ್ಷೇತ್ರದಲ್ಲಿ ಸ್ಯಾಚೆಟ್ ಹಾಲಿನ ಹಾಗೂ ಹಾಲಿನ ಉತ್ಪನ್ನಗಳ ಮಾರಾಟ ಹಾಗೂ ತೃತೀಯ ಹಂತದಲ್ಲಿ ಜಿಲ್ಲಾಮಟ್ಟದ ಹಾಲು ಒಕ್ಕೂಟಗಳು ಮತ್ತು ಹೈನುಗಾರಿಕೆ ಚಟುವಟಿಕೆಗಳನ್ನು ಸಮನ್ವಯಗೊಳಿಸಿ, ಬೆಳೆಸುವ ಶೃಂಗಸಂಸ್ಥೆಯಾಗಿ ರಾಜ್ಯಮಟ್ಟದಲ್ಲಿ ಕರ್ನಾಟಕ ಹಾಲು ಮಹಾಮಂಡಳಿಯು ಕಾರ್ಯ ನಿರ್ವಹಿಸುತ್ತಿರುತ್ತದೆ.
ಉಪ ಕಸುಬಾಗಿದ್ದ ಹೈನುಗಾರಿಕೆಯನ್ನು ಇಂದು ಒಂದು ಪ್ರಮುಖ ಉದ್ಯಮವಾಗಿ ಪರಿವರ್ತನೆ ಮಾಡಿಕೊಂಡಿರುವ ಕೆ ಎಂ ಎಫ್ ದೇಶದಲ್ಲಿಯೇ ಕೆಲವು ಸಂಘ ಸಂಸ್ಥೆಗಳಲ್ಲಿ ಒಂದಾಗಿದೆ.
4)ಹಾಲು ಒಕ್ಕೂಟಗಳ ನಡುವಣ ಕಾರ್ಯಚಟುವಟಿಕೆಗಳನ್ನು ಸಮನ್ವಯಗೊಳಿಸುವುದಲ್ಲದೆ ಹಾಲು ಮತ್ತು ಹಾಲಿನ ಉತ್ಪನ್ನಗಳಿಗೆ ಮಾರುಕಟ್ಟೆಯನ್ನು ಅಭಿವೃದ್ಧಿಗೊಳಿಸುವುದು ಕರ್ನಾಟಕ ಹಾಲು ಮಹಾಮಂಡಳಿಯ ಜವಾಬ್ದಾರಿಯಾಗಿರುತ್ತದೆ. ಆಯಾ ಸದಸ್ಯ ಹಾಲು ಒಕ್ಕೂಟಗಳು ತಮ್ಮ ವ್ಯಾಪ್ತಿ ಕಾರ್ಯಕ್ಷೇತ್ರದಲ್ಲಿ ಹಾಲಿನ ಮಾರಾಟವನ್ನು ವ್ಯವಸ್ಥೆಗೊಳಿಸುತ್ತವೆ. ಮಹಾಮಂಡಳಿಯು ಈ ಹಾಲು ಒಕ್ಕೂಟಗಳಲ್ಲಿನ ಹಾಲಿನ ಹೆಚ್ಚುವರಿ ಅಥವಾ ಕೊರತೆಯನ್ನು ಆಧರಿಸಿ ಹಾಲಿನ ವಿಲೇವಾರಿಗೆ ಸಮರ್ಪಕ ಮಾರ್ಗೋಪಾಯಗಳನ್ನು ಒಕ್ಕೂಟಗಳ ಸಮನ್ವಯದೊಂದಿಗೆ ರೂಪಿಸುತ್ತದೆ. ಕರ್ನಾಟಕ ರಾಜ್ಯವಲ್ಲದೆ ಹೊರರಾಜ್ಯಗಳಿಗೆ ಹಾಲು ಉತ್ಪನ್ನಗಳ ಮಾರಾಟವನ್ನು ಸ್ವತ: ಮಹಾಮಂಡಳಿಯೇ ವ್ಯವಸ್ಥೆ ಮಾಡುತ್ತದೆ. ಎಲ್ಲಾ ಹಾಲು ಮತ್ತು ಹಾಲಿನ ಉತ್ಪನ್ನಗಳು ಪ್ರತಿಷ್ಟಿತ ‘ನಂದಿನಿ’ ಬ್ರಾಡ್ ಹೆಸರಿನಲ್ಲಿ ಮಾರಾಟಗೊಳ್ಳುತ್ತಿವೆ.
5)ಸಹಕಾರಿ ಹಾಲು ಉತ್ಪಾದಕರ ಸಂಘಗಳನ್ನು ಆರ್ಥಿಕವಾಗಿ ಹಾಗೂ ಸಾಮಾಜಿಕವಾಗಿ ಸ್ವಾಯತ್ತ ಸಂಸ್ಥೆಗಳನ್ನಾಗಿ ಬೆಳೆಸುವ ನಿಟ್ಟಿನಲ್ಲಿ ಸಹಾಯಕ ಹಾಗೂ ಅನುಕೂಲಕರ ವಾತಾವರಣವನ್ನು ನೀಡುವುದರ ಮೂಲಕ ಕರ್ನಾಟಕ ರಾಜ್ಯದ ಗ್ರಾಮೀಣ ಪ್ರದೇಶಗಳಲ್ಲಿ ಸ್ವಾವಲಂಬಿ ಮತ್ತು ಸಶಕ್ತ ಆರ್ಥಿಕ ಪರಿಸ್ಥಿತಿಯನ್ನು ನಿರ್ಮಾಣ ಮಾಡಲು ಕರ್ನಾಟಕ ಹಾಲು ಮಹಾಮಂಡಳಿಯು ಶ್ರಮಿಸುತ್ತಿದೆ. ಕರ್ನಾಟಕ ರಾಜ್ಯದಲ್ಲಿನ ಕಳೆದ ನಾಲ್ಕು ದಶಕಗಳ ಹೈನು ಅಭಿವೃದ್ಧಿ ಕಾರ್ಯಕ್ರಮದಲ್ಲಿ, ಪ್ರಾರಂಭದಲ್ಲಿ ತಾನು ರೂಪಿಸಿಕೊಂಡಿದ್ದ ಧ್ಯೇಯೋದ್ದೇಶಗಳನ್ನು ಕಾರ್ಯಗತ ಮಾಡುವಲ್ಲಿ ಮಹಾಮಂಡಳಿಯು ಬೃಹತ್ ಪ್ರಮಾಣದ ಯಶಸ್ಸನ್ನು ಸಾಧಿಸಿದೆ. ರಾಜ್ಯದ ಗ್ರಾಮೀಣ ಪ್ರದೇಶಗಳಲ್ಲಿ ಬಡತನದಲ್ಲಿರುವ ನಿರುದ್ಯೋಗಿಗಳಿಗೆ ತಮ್ಮ ಆದಾಯವನ್ನು ಗಳಿಸಿಕೊಳ್ಳುವ ಸಾಮರ್ಥ್ಯವನ್ನು ಒದಗಿಸಿ ಒಂದು ಉಪ ಕಸುಬನ್ನು ದೊರಕಿಸಿಕೊಡುವಲ್ಲಿ, ಹಾಗೂ ಅತ್ಯಂತ ಸಮಂಜಸವಾದ ಬೆಲೆಯಲ್ಲಿ ನಗರ ಪ್ರದೇಶದ ಗ್ರಾಹಕರಿಗೆ ಉತ್ತಮ ಗುಣಮಟ್ಟದ ಹಾಲನ್ನು ಬೇಡಿಕೆಗನುಗುಣವಾಗಿ ಸರಬರಾಜು ಮಾಡುವಲ್ಲಿ, ಮಹಾಮಂಡಳಿಯು ಬಹುತೇಕ ಯಶಸ್ವಿಯಾಗಿದೆ.
6)ಕರ್ನಾಟಕ ಹಾಲು ಮಹಾಮಂಡಳಿಯ ಪರಿಣಾಮಕಾರಿ ಹೈನು ಅಭಿವೃದ್ಧಿ ಕಾರ್ಯಕ್ರಮಗಳು ಫಲಶೃತಿಯಾಗಿ ಕರ್ನಾಟಕದ ಗ್ರಾಮೀಣ ಪರಿಸರದ ಮೇಲೆ ಬಲವಾದ ಪ್ರಭಾವ ಹಾಗೂ ವ್ಯಾಪಕವಾದ ಪರಿಣಾಮ ಬೀರಿದೆ. ಹಾಲು ಉತ್ಪಾದಕರಿಗೆ ಅತ್ಯಂತ ಲಾಭದಾಯಕ ಹಾಲು ಖರೀದಿ ದರವಷ್ಟೇ ಅಲ್ಲದೆ, ಯಾವುದೇ ದೂರದ ಹಳ್ಳಿಗೆ ನಿರಂತರ ಪಶುವೈದ್ಯ ಸೇವೆಗಳು, ಸುಧಾರಿತ ತಳಿಗಳಿಗಾಗಿ ಉತ್ಕೃಷ್ಟ ಗುಣಮಟ್ಟದ ಕೃತಕ ಗರ್ಭಧಾರಣೆ, ಮಾರುಕಟ್ಟೆಗಿಂತಲೂ ಕಡಿಮೆ ದರದಲ್ಲಿ ಸಮತೋಲನ ಪಶು ಆಹಾರ ಸರಬರಾಜು, ಇವೇ ಮೊದಲಾದ ಸೌಲಭ್ಯಗಳ ಸಮರ್ಥ ಹಾಗೂ ಸಕಾಲಿಕ ಸೇವೆಗಳನ್ನು ರೈತರ ಮನೆಬಾಗಿಲಲ್ಲಿಯೇ ಒದಗಿಸುವುದರಿಂದ, ರೈತರು ತಮ್ಮದೇ ಆದ ಸಹಕಾರಿ ಸಂಘಗಳನ್ನು ಹೆಚ್ಚಿನ ರೀತಿಯಲ್ಲಿ ಬೆಂಬಲಿಸುವಂತೆ ಮಾಡಿದೆ. ರೈತರ ಈ ರೀತಿಯ ಬೆಂಬಲಿಸುವಿಕೆ ಎಷ್ಟರಮಟ್ಟಿಗೆ ಸಂಪೂರ್ಣವೆಂದರೆ, ಕರ್ನಾಟಕದಲ್ಲಿನ ರೈತರು ಉತ್ಪಾದಿಸುವ ಹೆಚ್ಚುವರಿ ಹಾಲನ್ನು ಕರ್ನಾಟಕ ಹಾಲು ಮಹಾಮಂಡಳಿಯ ಡೇರಿಗಳೇ ಖರೀದಿಸುತ್ತಿದ್ದು, ಇದರಿಂದ, ದೇಶದ ಇತರ ಭಾಗಗಳಲ್ಲಿ ವ್ಯಾಪಕವಾಗಿ ಪ್ರಚಲಿತವಿರುವ ಖಾಸಗಿ ಡೇರಿಗಳಿಂದ ಹಾಲು ಶೇಖರಣೆ ಕರ್ನಾಟಕದಲ್ಲಿ ಗಣನೀಯವಾಗಿ ಇಲ್ಲದಂತಾಗಿದೆ.
ವಿವರಗಳು | 1976-77 | 2018-19 | 2019-20 | 2020-21 | 2021-2022 | 2022-2023(JAN) |
---|---|---|---|---|---|---|
ಹಾಲು ಸಹಕಾರಿ ಸಂಘಗಳು |
416 |
16059 |
16071 |
16789 |
17014 | 17474 |
ನೋಂದಾಯಿತ ಸಂಘಗಳು (ಸಂಖ್ಯೆ) | ||||||
ಕಾಯಾಚರಣೆಯಲ್ಲಿರುವ ಸಂಘಗಳು (ಸಂಖ್ಯೆ) | 14512 | 14493 | 14864 | 15005 | 15311 | |
ಮಹಿಳಾ ನೋಂದಾಯಿತ ಸಂಘಗಳು (ಸಂಖ್ಯೆ) | 4122 | 4239 | 4547 | 4703 | 4939 | |
ಮಹಿಳಾ ಕಾಯಾಚರಣೆಯಲ್ಲಿರುವ ಸಂಘಗಳು (ಸಂಖ್ಯೆ) | 3777 | 3868 | 4079 | 4143 | 4286 | |
ಸ್ಪೆಪ್ ನೋಂದಾಯಿತ ಸಂಘಗಳು (ಸಂಖ್ಯೆ) | 2374 | 2474 | 2850 | 2855 | 2855 | |
ಸ್ಪೆಪ್ ಕಾಯಾಚರಣೆಯಲ್ಲಿರುವ ಸಂಘಗಳು (ಸಂಖ್ಯೆ) | 2199 | 2299 | 2540 | 2880 | 2880 | |
ಒಟ್ಟು ಸದಸ್ಯರು (ಲಕ್ಷಗಳಲ್ಲಿ) | 0.37 | 24.67 | 24.75 | 25.71 | 25.90 | 26.35 |
ದೈನಂದಿನ ಸರಾಸರಿ ಹಾಲು ಶೇಖರಣೆ (ಲಕ್ಷ ಕೆ.ಜಿ.ಗಳಲ್ಲಿ) |
0.50 | 75.87 | 75.61 | 78.74 | 81.66 | 81.13 |
ಗರಿಷ್ಠ ಹಾಲು ಶೇಖರಣೆ (ಲಕ್ಷ ಕೆ.ಜಿ.ಗಳಲ್ಲಿ) | 84.44(ಜೂನ್'18) | 84.44(ಜೂನ್'18) | 88.30(ಜುಲೈ'20) | 90.62(ಜೂನ್'21) | 94.18(ಜೂನ್'22) | |
ದೈನಂದಿನ ಹಾಲು ಮಾರಾಟ (ಲಕ್ಷ ಲೀ.ಗಳಲ್ಲಿ) |
0.95 | 35.47 | 35.57 | 35.60 | 37.17 | 42.83 |
ದೈನಂದಿನ ಮೊಸರು ಮಾರಾಟ (ಲಕ್ಷ ಕೆ.ಜಿ.ಗಳಲ್ಲಿ) | 6.28 | 6.18 | 5.14 | 5.92 | 7.59 | |
ದೈನಂದಿನ ಯು.ಹೆಚ್.ಟಿ. ಹಾಲು ಮಾರಾಟ (ಲಕ್ಷ ಲೀ.ಗಳಲ್ಲಿ) | 5.28 | 6.01 | 7.80 | 6.61 | 6.49 | |
ಉತ್ಪಾದಕರಿಗೆ ಪಾವತಿ ಯಾದ ಹಣ (ದಿನವೊಂದಕ್ಕೆ ರೂ.ಕೋಟಿಗಳಲ್ಲಿ) | 0.09 | 18.28 | 18.13 | 21.41 | 22.52 | 23.93 |
ವಾರ್ಷಿಕ ವಹಿವಾಟು (ಕಹಾಮ ಹಾಗೂ ಒಕ್ಕೂಟಗಳು ರೂ.ಕೋಟಿಗಳಲ್ಲಿ ) | 8.82 | 14465 | 16440 |
16962 |
19784 | 14018 |
ಕಹಾಮ ವ್ಯಾಪ್ತಿಯ 15 ಜಿಲ್ಲಾ ಒಕ್ಕೂಟಗಳ ಜೊತೆ ಕೆಳಕಂಡ ಘಟಕಗಳು ಕರ್ನಾಟಕ ಹಾಲು ಮಹಾಮಂಡಳಿಯ ನೇರ ನಿಯಂತ್ರಣದಲ್ಲಿ ಕಾರ್ಯ ನಿರ್ವಹಿಸುತ್ತಲಿವೆ.
Sl.No | ಪ್ರಗತಿಯಲ್ಲಿರುವ ಯೋಜನೆಗಳು |
---|---|
1 |
ಹಾಸನ ಹಾಲು ಒಕ್ಕೂಟಕ್ಕಾಗಿ ದಿನವಹಿ 10-15 ಲಕ್ಷ ಲೀ. ಸಾಮಥ್ರ್ಯದ ಮೆಗಾ ಡೇರಿ ಮತ್ತು 60 ಮೆ.ಟನ್ ಸಾಮಥ್ರ್ಯದ ಹಾಲು ಪುಡಿ ಘಟಕ ಯೋಜನೆಯನ್ನು ಅನುಷ್ಟಾನಗೊಳಿಸಲಾಗುತ್ತಿದ್ದು, ಸಿವಿಲ್ ಕೆಲಸಗಳು ಪ್ರಗತಿಯಲ್ಲಿರುತ್ತದೆ.
|
2 | ಹಾಸನ ಹಾಲು ಒಕ್ಕೂಟಕ್ಕಾಗಿ ಹಾಸನದಲ್ಲಿ 60 ಲಕ್ಷ ಲೀ. ಸಾಮಥ್ರ್ಯದ ಯು.ಹೆಚ್.ಟಿ. ಮತ್ತು ಪೆಟ್ ಬಾಟಲ್ ಹಾಲು ಸಂಗ್ರಹಿಸಲು Auto storage system & retrieval system ಮಾದರಿಯ ಗೋದಾಮು ಸ್ಥಾಪನೆಯ ಯೋಜನಾ ಕೆಲಸಗಳು ಪ್ರಗತಿಯಲ್ಲಿರುತ್ತದೆ. |
3 | ಹಾವೇರಿ ಜಿಲ್ಲೆಯ ಜಂಗಮಕೊಪ್ಪ ಗ್ರಾಮದಲ್ಲಿರುವ ಹಾವೇರಿ ಶೀಥಲೀಕರಣ ಕೇಂದ್ರದ ಆವರಣದಲ್ಲಿ ದಿನವಹಿ 1-1.5 ಲಕ್ಷ ಲೀ.ಸಂಸ್ಕರಣಾ ಡೇರಿ ಹಾಗೂ ಯು.ಹೆಚ್.ಟಿ. ಘಟಕ ಯೋಜನೆಯನ್ನು ಅನುಷ್ಟಾನಗೊಳಿಸಲಾಗುತ್ತಿದ್ದು, ಸಿವಿಲ್ ಕೆಲಸಗಳು ಪ್ರಗತಿಯಲ್ಲಿರುತ್ತದೆ. |
4 | ಬೆಳಗಾವಿ ಹಾಲು ಒಕ್ಕೂಟ ಮತ್ತು ಕಹಾಮ ಸಹಭಾಗಿತ್ವದಲ್ಲಿ ಬೆಳಗಾವಿ ಡೇರಿ ಆವರಣದಲ್ಲಿ ರೈತರ ಮಕ್ಕಳಿಗಾಗಿ ವಸತಿ ನಿಲಯ ಕಟ್ಟಡ ಕಾಮಗಾರಿ ಕೆಲಗಳು ಪ್ರಗತಿಯಲ್ಲಿರುತ್ತದೆ. |
5 | ಮದರ್ ಡೇರಿ ಘಟಕದಲ್ಲಿ ಉಪಾಹಾರ ಗೃಹ ವಿಸ್ತರಣೆ ಮತ್ತು ನೂತನ ಗೋದಾಮು ನಿರ್ಮಾಣ ಕೆಲಸಗಳು ಮತ್ತು ಮತ್ತಿತರೆ ಮೂಲಭೂತ ಸೌಕರ್ಯ ಅಭಿವೃದ್ಧಿ ಕೆಲಸಗಳು ಪ್ರಗತಿಯಲ್ಲಿರುತ್ತದೆ. |
6 | ಖಾಸಗಿ ಸಹಭಾಗಿತ್ವದಲ್ಲಿ ಕೋಲಾರ ಜಿಲ್ಲೆ - ಸಾದಲಿ ಮತ್ತು ದಡೇಸುಗೂರಿನಲ್ಲಿ ವಿವಿಧ ಸಾಮಥ್ರ್ಯದ ಪಶು ಆಹಾರ ಘಟಕಗಳನ್ನು ಅನುಷ್ಟಾನಗೊಳಿಸಲಾಗುತ್ತಿದೆ. |
8 |
ಪಿ.ಪಿ.ಪಿ. ಮಾದರಿಯಲ್ಲಿ ಬೆಂಗಳೂರಿನ ಚಳ್ಳಘಟ್ಟ ನಿವೇಶನದಲ್ಲಿ ಪ್ಯಾಕೇಜಿಂಗ್ ಮೆಟೀರಿಯಲ್ಸ್ ತಯಾರಿಕಾ ಘಟಕವನ್ನು ಅನುಷ್ಟಾನಗೊಳಿಸಲಾಗುತ್ತಿದೆ. |
9 |
ಕಲಬುರ್ಗಿ ಹಾಲು ಒಕ್ಕೂಟಕ್ಕಾಗಿ ಕಲಬುರ್ಗಿ ಡೇರಿಯಲ್ಲಿ ಮೂಲಭೂತ ಸೌಕರ್ಯ ಅಭಿವೃದ್ಧಿ ಕೆಲಸಗಳು ಪ್ರಗತಿಯಲ್ಲಿರುತ್ತದೆ. |
10 | ಬಳ್ಳಾರಿ ಐಸ್ ಕ್ರೀಮ್ ಘಟಕದಲ್ಲಿ ಉಪಾಹಾರ ಗೃಹ ನಿರ್ಮಾಣ, ಪ್ಯಾಕಿಂಗ್ ಮೆಟೀರಿಯಲ್ಸ್ ಶೇಖರಣಾ ಗೋದಾಮು, ಪ್ರೋಸೆಸಿಂಗ್ ಹಾಲ್ ವಿಸ್ತರಣೆ, ಬಾಯ್ಲರ್ ಅಳವಡಿಕೆ, ಕುಡಿಯುವ ನೀರಿನ ಘಟಕ ಮತ್ತಿತರೆ ಮೂಲಭೂತ ಸೌಕರ್ಯ ಅಭಿವೃದ್ಧಿ ಕೆಲಸಗಳು ಪ್ರಗತಿಯಲ್ಲಿರುತ್ತದೆ. |
11 | ಹಾಸನ ಹಾಲು ಒಕ್ಕೂಟ ಹಾಗೂ ತುಮಕೂರು ಹಾಲು ಒಕ್ಕೂಟಗಳಲ್ಲಿ ವಿವಿಧ ಮೂಲಭೂತ ಸೌಕರ್ಯ ಅಭಿವೃದ್ಧಿ ಕೆಲಸಗಳು ಪ್ರಗತಿಯಲ್ಲಿರುತ್ತದೆ. |
1 |
ಮುಂಬರುವ ಯೋಜನೆಗಳು ತುಮಕೂರು ಹಾಲು ಒಕ್ಕೂಟಕ್ಕಾಗಿ ದಿನವಹಿ 10 ಲಕ್ಷ ಲೀ. ಸಾಮಥ್ರ್ಯದ ಮೆಗಾ ಡೇರಿ ಯೋಜನೆಯನ್ನು ಅನುಷ್ಟಾನಗೊಳಿಸುವ ಸಂಬಂಧ ಟೆಂಡರ್ ಪ್ರಕ್ರಿಯೆ ಜಾರಿಯಲ್ಲಿರುತ್ತದೆ. |
2 | ಕಹಾಮದ ವಿವಿಧ ಪಶು ಆಹಾರ ಘಟಕಗಳಲ್ಲಿ ವಿವಿಧ ಸಾಮಥ್ರ್ಯದ ಕಚ್ಛಾಮಾಲು ಶೇಖರಣಾ ಗೋದಾಮು ನಿರ್ಮಾಣ/ಮೊಲಾಸಿಸ್ ಸ್ಟೋರೇಜ್ ಟ್ಯಾಂಕ್ ಗಳನ್ನು ಅನುಷ್ಟಾನಗೊಳಿಸಲು ಉದ್ದೇಶಿಸಲಾಗಿದೆ. |
3 | ಉತ್ತರ ಕರ್ನಾಟಕ ಭಾಗದಲ್ಲಿ ಹೈಟೆಕ್ ಮೆಗಾ ನಂದಿನಿ ಡೇರಿ ಫುಡ್ ಪಾರ್ಕ್ ಸ್ಥಾಪಿಸಲು ಉದ್ದೇಶಿಸಲಾಗಿದೆ. |
4 | ಕಹಾಮವು ಕಹಾಮ ಘಟಕಗಳು ಮತ್ತು ಜಿಲ್ಲಾ ಹಾಲು ಒಕ್ಕೂಟಗಳ ಒಟ್ಟಾರೆ ವಿದ್ಯುಚ್ಛಕ್ತಿ ಬಳಕೆಯನ್ನು ಕ್ರೋಢೀಕರಿಸಿ ಸೋಲಾರ್ ಗ್ರೂಪ್ ಕ್ಯಾಪ್ಟೀವ್ ಜನರೇಷನ್ ವ್ಯವಸ್ಥೆ ಅಡಿಯಲ್ಲಿ ಎಲ್ಲಾ ಒಕ್ಕೂಟಗಳು ಹಾಗೂ ಕಹಾಮ ಪರವಾಗಿ ಕೇಂದ್ರೀಕೃತ ವ್ಯವಸ್ಥೆಯಾಗಿ ನಿರ್ವಹಿಸಲು ಉದ್ದೇಶಿಸಲಾಗಿದೆ. |
5 | ಬೆಂಗಳೂರು ನಗರ ವ್ಯಾಪ್ತಿಯಲ್ಲಿ ಕಹಾಮವು ಕೇಂದ್ರೀಕೃತ ಹಾಲಿನ ಸಂಸ್ಕರಣೆ ಘಟಕ, ಹಾಲಿನ ಉತ್ಪನ್ನಗಳ ಘಟಕ ಮತ್ತಿತ್ತರೆ ಅಭಿವೃದ್ಧಿ ಚಟುವಟಿಕೆಗಳನ್ನು ಒಳಗೊಂಡ ಮದರ್ ಡೇರಿ ಘಟಕ-2 ವನ್ನು ಅನುಷ್ಠಾನಗೊಳಿಸಲು ಉದ್ದೇಶಿಸಲಾಗಿದೆ. |
6 | ನೂತನ ನಂದಿನಿ ಪ್ಯಾಕೇಜಿಂಗ್ ಫಿಲಂ ಪ್ಲಾಂಟ್ ಘಟಕ ಸ್ಥಾಪನೆ. |
7 | ವಿವಿಧ ಒಕ್ಕೂಟಗಳ ಕೋರಿಕೆಯಂತೆ ಒಕ್ಕೂಟಗಳ ವ್ಯಾಪ್ತಿಯಲ್ಲಿ ಹೈನುಗಾರಿಗೆ ರೈತರ ಮಕ್ಕಳ ವಿದ್ಯಾಭ್ಯಾಸಕ್ಕೆ ಅನುಕೂಲವಾಗುವಂತೆ ಸೂಕ್ತ ಸ್ಥಳಗಳಲ್ಲಿ ಒಕ್ಕೂಟಗಳ ಸಹಯೋಗದೊಂದಿಗೆ ಹಾಸ್ಟಲ್ ನಿರ್ಮಾಣ ಮಾಡಲು ಉದ್ದೇಶಿಸಲಾಗಿದೆ. |
ಕರ್ನಾಟಕ ಸಹಕಾರಿ ಹಾಲು ಉತ್ಪಾದಕರ ಮಹಾಮಂಡಳಿ ನಿಯಮಿತ .
ಕಹಾಮ ಸಂಕೀರ್ಣ, ಅಂಚೆ ಪೆಟ್ಟಿಗೆ ಸಂಖ್ಯೆ- 2915,
ಡಿ. ಆರ್. ಕಾಲೇಜು ಅಂಚೆ, ಡಾ.ಎಂ.ಹೆಚ್.ಮರಿಗೌಡ ರಸ್ತೆ,
ಬೆಂಗಳೂರು-560029, ಕರ್ನಾಟಕ.
080-260 96800
ಸಹಾಯವಾಣಿ:
1800 425 8030 toll free 10.00AM - 5.30PM
(ಎರಡನೇ ಶನಿವಾರ, ನಾಲ್ಕನೇ ಶನಿವಾರ, ಭಾನುವಾರ ಹಾಗು ಇತರೆ ರಾಜ್ಯ ಸರ್ಕಾರ ರಜಾ ದಿನಗಳನ್ನು ಹೊರತು ಪಡಿಸಿ)
ನಂದಿನಿ ನೆರವು ದೂರವಾಣಿ ಸಂಖ್ಯೆ (24*7):
080-66660000
ಫಾಕ್ಸ್:: 080-255 36105