1800 425 8030 ಟೋಲ್ ಫ್ರೀ 10.00AM - 5.30PM
ಎರಡನೇ ಶನಿವಾರ, ಭಾನುವಾರ ಹಾಗೂ ಸರ್ಕಾರಿ ರಜಾ ದಿನಗಳನ್ನು ಹೊರತುಪಡಿಸಿ

ಗುಣಮಟ್ಟ ಹಾಗೂ ಆಹಾರ ಸಂರಕ್ಷಣೆ

ಕಳೆದ ಹತ್ತು ವರ್ಷಗಳಲ್ಲಿ ‘‘ಗೋವಿನಿಂದ ಗ್ರಾಹಕರಿಗೆ ಗುಣಮಟ್ಟದ ಉತ್ಕೃಷ್ಟತೆ’’ ಎಂಬ ಪರಿಕಲ್ಪನೆಯಡಿಯಲ್ಲಿ ಕಹಾಮ ಸಹಕಾರ ಸಂಘಗಳಿಂದ ಗುಣಮಟ್ಟದ ಹಾಲಿನ ಶೇಖರಣೆಗೆ ಒತ್ತು ನೀಡಿದೆ. ಹಾಲು ಶೇಖರಣೆ, ಸಂಸ್ಕರಣೆ ಹಾಗೂ ಮಾರಾಟದ ವಿವಿಧ ಹಂತಗಳಲ್ಲಿ ಗುಣಮಟ್ಟದ ಹಾಲಿನ ಕಾರ್ಯರೂಪಗಳಿಸುವ ಅನೇಕ ಉಪಕ್ರಮಗಳನ್ನು ರಚಿಸಲಾಗಿದೆ. ಈ ಗುಣಮಟ್ಟದ ಹಾಲಿನ ಕಾರ್ಯರೂಪಗಳ ಉಪಕ್ರಮಗಳಲ್ಲಿ ಗಮನಾರ್ಹ ಉಪಕ್ರಮವು ಹಳ್ಳಿಗಳಲ್ಲಿ ಸಮುದಾಯ ಹಾಲುಕರೆಯುವ ಪಾರ್ಲರ್‍ಗಳ ರಚನೆಯಾಗಿದೆ.

ಕರ್ನಾಟಕ ಹಾಲು ಮಹಾಮಂಡಳಿಯು ಇಂತಹ ನೂತನ ತಂತ್ರಜ್ಞಾನದ ಉಪಕ್ರಮವನ್ನು ಪರಿಚಯಿಸುವ ಹರಿಹಾರ ಆಗಿದ್ದು ಸಹಕಾರಿ ಸಂಘಗಳಿಂದ ಗುಣಮಟ್ಟದ ಹಾಲಿನ ಶೇಖರಣೆ ಮಾಡುವಲ್ಲಿ ಕ್ರಾಂತಿ ಹಾಡಿದೆ. ಈ ವ್ಯವಸ್ಥೆಯು ಅನೇಕ ಪ್ರಯೋಜನಗಳನ್ನು ಹೊಂದಿದ್ದು, ಇದರಿಂದ ಕರಾವಿನ ಪ್ರಾಣಿಗಳಲ್ಲಿ ಉರಿಯೂತ ಹೊರಹಾಕುವಿಕೆ (ಕೆಚ್ಚಲು ಬಾವು) ಹಾಗೂ ಹಾಲು ಉತ್ಪಾದನೆಯಲ್ಲಿ  ಅಭಿವೃದ್ದಿ ಹೊಂದಲು ಸಾದ್ಯವಾಗುವುದು. ಹಾಲು ಕರೆಯುವ ಯಂತ್ರಗಳಿಂದ ಹಾಲನ್ನು ಗಣಕೀಕೃತ ಹಾಲು ಸಂಗ್ರಹ ಘಟಕಗಳ (AMCU) ಮೂಲಕ ಸಂಗ್ರಹಿಸಿ ನೇರವಾಗಿ ಸಾಂದ್ರ ಶೀಥಲೀಕರಣ ಘಟಕಗಳಲ್ಲಿ (BMC) ತಣ್ಣಗಾಗಿಸಲ್ಪಡಲಾಗುತ್ತದೆ. ಈ ತಣ್ಣಗಾಗಿಸಲ್ಪಟ್ಟ ಹಾಲು ಮನುಷ್ಯನ ಕೈಗಳಿಂದ ತಗುಲದೇ, ಕಲಬೆರಕೆಯಾಗದೇ ಸೂಕ್ಷ್ಮಾಣುಜೀವಿರಹಿತವಾಗಿದ್ದು ಅಂತರರಾಷ್ಟ್ರೀಯ ಗುಣಮಟ್ಟವನ್ನು ಹೊಂದಿರುತ್ತದೆ. ಈ ಗುಣಮಟ್ಟದ ಹಾಲು ಉತ್ತಮ ಗುಣಮಟ್ಟದ ಮೌಲ್ಯಾಧಾರಿತ ಹಾಲು ಉತ್ಪನ್ನಗಳ ತಯಾರಿಕೆಗೆ ಬಳಸಲಾಗುತ್ತಿದ್ದು, ದೇಶೀಯ ಹಾಗೂ ಅಂತರರಾಷ್ಟ್ರೀಯ ಮಾರುಕಟ್ಟೆಯ ವಿತರಣೆಗೆ ಬಳಸಲಾಗುತ್ತದೆ.
 

ಇತರೆ ಗುಣಮಟ್ಟದ ಹಾಲು ಉತ್ಪಾದನಾ ಉಪಕ್ರಮಗಳು ಈ ಕೆಳಕಂಡಂತಿವೆ:

•    ಆಧುನಿಕ ಡೇರಿ  ಸಂಗೋಪನಾ ಪದ್ಧತಿ ಹಾಗೂ ಗುಣಮಟ್ಟದ ಹಾಲು ಸಂಗ್ರಹಣಾ ಪದ್ಧತಿಯ ಬಗ್ಗೆ ಹಾಲು ಉತ್ಪಾದಕರಿಗೆ ತರಬೇತಿ.

•    ಹಾಲು ಉತ್ಪಾದಕರಿಗೆ ಸ್ಟೈನ್‍ಲೆಸ್ ಸ್ಟೀಲ್ ಪಾತ್ರೆಗಳು, ಹಾಲು ಕರೆಯುವ ಮೊದಲು ಹಾಗೂ ನಂತರ ಕೆಚ್ಚಲನ್ನು ಶುಚಿಗೊಳಿಸುವ  ನಂಜುನಿರೋಧಕ ಔಷಧಗಳ ವಿತರಣೆ.

•    ಸಹಕಾರಿ ಸಂಘಗಳ ಸಿಬ್ಬಂದಿಗಳಿಗೆ ಹಾಗೂ ಒಕ್ಕೂಟಗಳ ಅಧಿಕಾರಿಗಳಿಗೆ ಗುಣಮಟ್ಟದ ಹಾಲು ಸಂಗ್ರಹಣಾ ಪದ್ಧತಿಯ ಬಗ್ಗೆ  ತರಬೇತಿ.

•    ಹಾಲು ಸಂಗ್ರಹಣೆಗಾಗಿ ಬಳಸಲಾಗುವ ಅಲ್ಯೂಮಿನಿಯಂ ಪಾತ್ರೆಗಳು ಹಾಗೂ ಇತರೆ ಪರಿಕರಗಳನ್ನು ಸ್ಟೈನ್‍ಲೆಸ್ ಸ್ಟೀಲ್ – 304 ನಿಂದ ಬದಲಾಯಿಸುವುದು.

•    ಗುಣಮಟ್ಟದ ಹಾಲು ಸಂಗ್ರಹಣಾ ಪದ್ಧತಿಯ ಬಗ್ಗೆ ಸಂಬಂಧಪಟ್ಟ ಪೋಸ್ಟರ್‍ಗಳು, ಸಾಕ್ಷ್ಯಚಿತ್ರಗಳು  ಹಾಗೂ ಪುಸ್ತಕಗಳ ವಿತರಣೆ.

ವಿಳಾಸ

ಕರ್ನಾಟಕ ಸಹಕಾರಿ ಹಾಲು ಉತ್ಪಾದಕರ ಮಹಾಮಂಡಳಿ ನಿಯಮಿತ .
ಕಹಾಮ ಸಂಕೀರ್ಣ, ಅಂಚೆ ಪೆಟ್ಟಿಗೆ ಸಂಖ್ಯೆ- 2915,
ಡಿ. ಆರ್. ಕಾಲೇಜು ಅಂಚೆ, ಡಾ.ಎಂ.ಹೆಚ್.ಮರಿಗೌಡ ರಸ್ತೆ,
ಬೆಂಗಳೂರು-560029, ಕರ್ನಾಟಕ.

ದೂರವಾಣಿ

080-260 96800

ಸಹಾಯವಾಣಿ:

1800 425 8030 toll free 10.00AM - 5.30PM

(ಎರಡನೇ ಶನಿವಾರ, ನಾಲ್ಕನೇ ಶನಿವಾರ, ಭಾನುವಾರ ಹಾಗು ಇತರೆ ರಾಜ್ಯ ಸರ್ಕಾರ ರಜಾ ದಿನಗಳನ್ನು ಹೊರತು ಪಡಿಸಿ)

ನಂದಿನಿ ನೆರವು ದೂರವಾಣಿ ಸಂಖ್ಯೆ (24*7):

080-66660000

ಫಾಕ್ಸ್:: 080-255 36105