1800 425 8030 ಟೋಲ್ ಫ್ರೀ 10.00AM - 5.30PM
ಎರಡನೇ ಶನಿವಾರ, ಭಾನುವಾರ ಹಾಗೂ ಸರ್ಕಾರಿ ರಜಾ ದಿನಗಳನ್ನು ಹೊರತುಪಡಿಸಿ

ಕೋಲಾರ ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ನಿಯಮಿತ

“ರೇಷ್ಮೆಯ ನಾಡು” ಎಂದೆನಿಸಿಕೊಂಡಿದ್ದ ಕೋಲಾರ ಇಂದು “ಕ್ಷೀರ ನಾಡು”.

1987ರಲ್ಲಿ ಸ್ವಾಯತ್ತತೆಯನ್ನು ಪಡೆದುಕೊಂಡ ಕೋಲಾರ ಒಕ್ಕೂಟವು 11 ತಾಲ್ಲೂಕುಗಳನ್ನು ಒಳಗೊಂಡಂತೆ ಕಾರ್ಯಾಚರಣೆಯಲ್ಲಿರುವ 1,874 ಹಾಲು ಉತ್ಪಾದಕರ ಸಂಘಗಳನ್ನು ಹೊಂದಿದೆ.  ಕೋಲಾರ ಡೇರಿಯು ಪ್ರತಿನಿತ್ಯ 4.05 ಲಕ್ಷ ಲೀಟರ್ ಹಾಲನ್ನು ಸಂಸ್ಕರಿಸುವ ಸಾಮರ್ಥ್ಯವನ್ನು ಹೊಂದಿದೆ, ಅಲ್ಲದೆ ದಿನಕ್ಕೆ 2.50ಲಕ್ಷ ಲೀಟರ್ ತಯಾರಿಕಾ ಸಾಮರ್ಥ್ಯದ ಯು.ಹೆಚ್.ಟಿ ಘಟಕವನ್ನು ಸಹ ಹೊಂದಿದೆ.

ಈ ಒಕ್ಕೂಟದ ವಿಶೇಷತೆ –

  1.  “ಗುಡ್ ಲೈಫ್’ ಹಾಲನ್ನು ರೆಫ್ರಿಜರೇಷನ್ ಇಲ್ಲದೆ 60 ದಿನಗಳ ಕಾಲ ಕೆಡದಂತೆ ಇಡಲು ಬೇಕಾದ ಯು.ಹೆಚ್.ಟಿ (Ultra High Temperature) ಘಟಕದ ಅಳವಡಿಕೆ
  2. ಆರೋಗ್ಯದ ಬಗ್ಗೆ ಕಾಳಜಿ ಬಯಸುವವರಿಗಾಗಿ ಕಡಿಮೆ ಜಿಡ್ಡಿನಾಂಶದ ಆದರೆ ಸಮೃದ್ಧ ವಿಟಮಿನ್ ಹೊಂದಿರುವ “ಸ್ಮಾರ್ಟ್” ಮತ್ತು “ಸ್ಲಿಮ್” ಹಾಲಿನ ಉತ್ಪಾದನೆ
  3. ನೇರವಾಗಿ ಕುಡಿಯುವ ಸುವಾಸಿತ ಯೋಗರ್ಟ್
  4.  ಪರ್ಲ್-ಪೆಟ್ ಜಾರ್ ನಲ್ಲಿ ತುಪ್ಪ
  5. ಚೀಸ್ ತಯಾರಿಕಾ ಘಟಕ
  6. ಅಮುಲ್ ಗಾಗಿ ಮಸ್ತಿ ದಹಿಯ ಉತ್ಪಾದನೆ

ಚಿಂತಾಮಣಿಯಲ್ಲಿ 1.00 ಲಕ್ಷ ಲೀಟರ್, ಸಾದಲಿಯಲ್ಲಿ 1.00 ಲಕ್ಷ ಲೀಟರ್ ಮತ್ತು ಗೌರಿಬಿದನೂರಿನಲ್ಲಿ 1.00 ಲಕ್ಷ ಲೀಟರ್ ಸಾಮರ್ಥ್ಯಗಳ ಶೀತಲಕೇಂದ್ರಗಳನ್ನು ಹೊಂದಿದ್ದು, ಒಟ್ಟಾರೆ 3.00 ಲಕ್ಷ ಲೀಟರ್ ಹಾಲನ್ನು ಶೀತಲೀಕರಿಸುವ ಸಾಮರ್ಥ್ಯವನ್ನು ಹೊಂದಿದೆ.  ಅಲ್ಲದೆ, ಒಕ್ಕೂಟದಲ್ಲಿ 367 ಬಲ್ಕ್ ಮಿಲ್ಕ್ ಕೂಲರ್, 397 ಸ್ವಯಂಚಾಲಿತ ಹಾಲು ಶೇಖರಣೆ ಕೇಂದ್ರಗಳು ಮತ್ತು 68 ಸಾಮೂಹಿಕ ಹಾಲು ಕರೆಯುವ ಪಾರ್ಲರ್‍ಗಳು ಕಾರ್ಯಾಚರಣೆಯಲ್ಲಿವೆ.

ಈ ಒಕ್ಕೂಟವು ಪ್ರತಿನಿತ್ಯ ಸರಾಸರಿ 9.49 ಲಕ್ಷ ಕೇಜಿ ಹಾಲನ್ನು ಶೇಖರಣೆ ಮಾಡುತ್ತಲಿದ್ದು, ಸರಾಸರಿ 3.14 ಲಕ್ಷ ಲೀಟರ್ ಹಾಲನ್ನು ಮಾರಾಟ ಮಾಡುತ್ತಿದೆ ಮತ್ತು 0.40 ಲಕ್ಷ ಕೇಜಿ ಮೊಸರನ್ನು ಮಾರಾಟ ಮಾಡುತ್ತಿದ್ದು ಒಕ್ಕೂಟವು ಬೆಣ್ಣೆ, ತುಪ್ಪ, ಪೇಡಾ, ಕ್ರೀಮ್ ಮತ್ತು ಚೀಸ್‍ಅನ್ನು ಸಹ ಮಾರಾಟ ಮಾಡುತ್ತಲಿದೆ.

ಒಕ್ಕೂಟದ ಹಿರಿಮೆ:    ಶುದ್ಧ ಹಾಲು ಉತ್ಪಾದನೆ ಕಾರ್ಯಕ್ರಮವನ್ನು ಅನುಷ್ಠಾನಗೊಳಿಸುವಲ್ಲಿ, ಸಮುದಾಯ ಹಾಲು ಕೇಂದ್ರಗಳನ್ನು ಪ್ರಾರಂಭಿಸುವಲ್ಲಿ, ಬಲ್ಕ್ ಮಿಲ್ಕ್ ಕೂಲರ್ಗಳನ್ನು  ಸ್ಥಾಪಿಸುವಲ್ಲಿ, ಅತ್ಯಂತ ಹೆಚ್ಚಿನ ಉತ್ಪಾದನೆಯೊಂದಿಗೆ “ಗುಡ್ ಲೈಫ್” ಯು.ಹೆಚ್.ಟಿ ಹಾಲಿನ ಮಾರಾಟವನ್ನು ಪ್ರಾರಂಭಿಸುವಲ್ಲಿ, ಈ ಎಲ್ಲಾ ಕಾರ್ಯಚಟುವಟಿಕೆಗಳನ್ನು ಪ್ರವರ್ತನಗೊಳಿಸುವಲ್ಲಿ ಮೊಟ್ಟಮೊದಲ ಹಾಲು ಒಕ್ಕೂಟ.  ಉತ್ಕೃಷ್ಟ ಗುಣಮಟ್ಟದ ಚೀಸ್, ಸುವಾಸಿತ ಯೋಘರ್ಟ್, ಪರ್ಲ್-ಪೆಟ್ ಜಾರಿನಲ್ಲಿ ತುಪ್ಪ,       ಮಸ್ತಿದಹಿ, ಈ ಉತ್ಪನ್ನಗಳಿಗೆ ಹೆಸರುವಾಸಿ.  ಚುನಾಯಿತ ಮಹಿಳಾ ನಿರ್ದೇಶಕಿಯೊಬ್ಬರನ್ನು ಮಂಡಳಿಯಲ್ಲಿ ಹೊಂದಿದ ಆದ್ಯತೆಯನ್ನು ಸಾಧಿಸಿದ ಹೆಗ್ಗಳಿಕೆ.

 

ಕೋಲಾರ ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ನಿಯಮಿತ,
ಕೋಲಾರ ಡೇರಿ, ರಾಷ್ಟ್ರೀಯ ಹೆದ್ದಾರಿ-4 , ಹುತ್ತೂರು 
 ಅಂಚೆ, ಕೋಲಾರ - 563 102, ಕರ್ನಾಟಕ.
ಫೋನ್: 08152-210021 / 210510
ಫ್ಯಾಕ್ಸ್: 08152-210480
ಇ-ಮೈಲ್[email protected]  Read More...

ವಿಳಾಸ

ಕರ್ನಾಟಕ ಸಹಕಾರಿ ಹಾಲು ಉತ್ಪಾದಕರ ಮಹಾಮಂಡಳಿ ನಿಯಮಿತ .
ಕಹಾಮ ಸಂಕೀರ್ಣ, ಅಂಚೆ ಪೆಟ್ಟಿಗೆ ಸಂಖ್ಯೆ- 2915,
ಡಿ. ಆರ್. ಕಾಲೇಜು ಅಂಚೆ, ಡಾ.ಎಂ.ಹೆಚ್.ಮರಿಗೌಡ ರಸ್ತೆ,
ಬೆಂಗಳೂರು-560029, ಕರ್ನಾಟಕ.

ದೂರವಾಣಿ

080-260 96800

ಸಹಾಯವಾಣಿ:

1800 425 8030 toll free 10.00AM - 5.30PM

(ಎರಡನೇ ಶನಿವಾರ, ನಾಲ್ಕನೇ ಶನಿವಾರ, ಭಾನುವಾರ ಹಾಗು ಇತರೆ ರಾಜ್ಯ ಸರ್ಕಾರ ರಜಾ ದಿನಗಳನ್ನು ಹೊರತು ಪಡಿಸಿ)

ನಂದಿನಿ ನೆರವು ದೂರವಾಣಿ ಸಂಖ್ಯೆ (24*7):

080-66660000

ಫಾಕ್ಸ್:: 080-255 36105