logo-home

ಕಹಾಮ ಸಾಧನೆಗಳು

>

ಪ್ರಶಸ್ತಿಗಳು

ಪ್ರಶಸ್ತಿಗಳು

ಕೆ.ಎಂ.ಎಫ್ ನ ನಂದಿನಿ ಬ್ರ್ಯಾಂಡ್ 2009 ರಲ್ಲಿ ಸಂಡೇ ಇಂಡಿಯನ್ ಮತ್ತು IIPM ಪ್ರಾದೇಶಿಕ ಶ್ರೇಷ್ಠ ಪ್ರಶಸ್ತಿಯಲ್ಲಿ ಕರ್ನಾಟಕದ ಅತ್ಯಂತ ಮೌಲ್ಯಯುತ ಬ್ರಾಂಡ್ ಎಂದು ಗುರುತಿಸಲ್ಪಟ್ಟಿದೆ.

ಕೆ.ಎಂ.ಎಫ್ ನ ನಂದಿನಿ ಬ್ರ್ಯಾಂಡ್ 2009 ರಲ್ಲಿ ಸಂಡೇ ಇಂಡಿಯನ್ ಮತ್ತು IIPM ಪ್ರಾದೇಶಿಕ ಶ್ರೇಷ್ಠ ಪ್ರಶಸ್ತಿಯಲ್ಲಿ ಕರ್ನಾಟಕದ ಅತ್ಯಂತ ಮೌಲ್ಯಯುತ ಬ್ರಾಂಡ್ ಎಂದು ಗುರುತಿಸಲ್ಪಟ್ಟಿದೆ.

ಭಾರತದಾದ್ಯಂತ ವಿಶ್ವಾಸನೀಯ ಹಾಗೂ ಜನಪ್ರಿಯ ಇಂಗ್ಲೀಷ್ ನಿಯತಕಾಲಿಕ ಪತ್ರಿಕೆಯಾದ ರೀಡರ್ಸ್ ಡೈಜೆಸ್ಟ್ ರವರು 2010 ರಲ್ಲಿ ವಿಶ್ವಾಸಾರ್ಹ ಬ್ರಾಂಡ್ ಸಮೀಕ್ಷೆಯನ್ನು ನಡೆಸಿ ಕೆ.ಎಂ.ಎಫ್ ನ ನಂದಿನಿಗೆ ಹಾಲು ವಿಭಾಗದಲ್ಲಿ ಚಿನ್ನದ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ. ಸಮೀಕ್ಷೆಯು ದೇಶಾದ್ಯಂತ 1.3 ಮಿಲಿಯನ್ ಓದುಗರ ಅಭಿಪ್ರಾಯವನ್ನು ಒಳಗೊಂಡಿತ್ತು.

2014 ರಲ್ಲಿ ಬೆಂಗಳೂರಿನಲ್ಲಿ ಜರುಗಿದ “ಬೆಂಗಳೂರು ಬ್ರಾಂಡ್ ಶೃಂಗಸಭೆ-2014” ರ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಕೆ.ಎಂ.ಎಫ್ ನ ನಂದಿನಿಯನ್ನು ಟಾಪ್ ಬ್ರಾಂಡ್‌ಗಳಲ್ಲೊಂದೆಂದು ಗುರುತಿಸುವುದರ ಜೊತೆಗೆ ಭಾರತದ ಪ್ರೀಮಿಯರ ಮಾರ್ಕೆಟಿಂಗ್ ಪ್ರಶಸ್ತಿಯನ್ನು ನೀಡಲಾಯಿತು.

08.06.2015 ರಂದು ಬೆಂಗಳೂರಿನ ರೋಟರಿ ಕ್ಲಬ್‌ನಲ್ಲಿ ರೋಟರಿ ಕ್ಲಬ್ ಆಫ್ ಬೆಂಗಳೂರು ಅಧ್ಯಕ್ಷರಾದ ರಾಮ್ ಕುಮಾರ್ ಶೇಷು ರವರು 2014-15ನೇ ಸಾಲಿನ ಕಾರ್ಪೊರೇಟ್ ಸಿಟಿಜನ್ ಪ್ರಶಸ್ತಿಯನ್ನು ಕೆ.ಎಂ.ಎಫ್ ವ್ಯವಸ್ಥಾಪಕ ನಿರ್ದೇಶಕ ಶ್ರೀ.ಎಸ್.ಎನ್.ಜಯರಾಮ್ ಐಎಎಸ್ ಅವರಿಗೆ ಪ್ರದಾನ ಮಾಡಿದರು.

ಪ್ರಶಸ್ತಿಗಳು

Follow us:

ವಿಳಾಸ

Karnataka Co-operative Milk Producers Federation Ltd No 2915, D. R. College Post, Dr M H Marigowda Road, Bangalore-560029, Karnataka.

ದೂರವಾಣಿ

080-260 96800 Helpline : 1800 425 8030 toll free 10:00AM - 5:45PM (Except Second Saturday, Fourth Saturday, Sunday and other State Government Holidays)

ಮಿಂಚಂಚೆ

customercare.nandini@kmf.coop

© Copyright ©2024 - 2025 Karnataka Milk Federation

All rights reserved to KMF-MIS (CENTRAL OFFICE).

Created with passion by Velozity Global