1800 425 8030 ಟೋಲ್ ಫ್ರೀ 10.00AM - 5.30PM
ಎರಡನೇ ಶನಿವಾರ, ಭಾನುವಾರ ಹಾಗೂ ಸರ್ಕಾರಿ ರಜಾ ದಿನಗಳನ್ನು ಹೊರತುಪಡಿಸಿ

ನಂದಿನಿ ಹಾಲು ಮತ್ತು ಮೊಸರಿನ ದರದಲ್ಲಿ 2 ರೂಪಾಯಿ ಏರಿಕೆ

Date: 
23-ನವೆಂಬರ್ -2022

ನಂದಿನಿ ಹಾಲು ಹಾಗೂ ಮೊಸರು ದರ ಏರಿಕೆಯಾಗಲಿದೆ. ಪ್ರತಿ ಲೀಟರ್ ನಂದಿನಿ ಹಾಲಿನ ದರದಲ್ಲಿ 2 ರೂಪಾಯಿ ಏರಿಸಲು ಕೆಎಂಎಫ್ ನಿರ್ಧರಿಸಿದೆ ಹಾಗೂ ಮೊಸರಿನ ಬೆಲೆಯೂ ಕೂಡ 2 ರೂಪಾಯಿ ಏರಿಕೆ ಮಾಡಲಾಗಿದೆ ಎಂದು ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಪ್ರಕಟಿಸಿದ್ದಾರೆ.

ಕರ್ನಾಟಕ ಹಾಲು ಒಕ್ಕೂಟವು ನಡೆಸಿದ ಸಭೆಯಲ್ಲಿ ನಂದಿನಿ ಹಾಲಿನ ದರ ಏರಿಕೆಗೆ ಸಂಬಂಧಿಸಿದಂತೆ ಅಂತಿಮ ನಿರ್ಣಯ ಕೈಗೊಳ್ಳಲಾಗಿದೆ. ಹೈನುಗಾರಿಕೆಗೆ ಹೆಚ್ಚಿನ ಒತ್ತು ನೀಡುವುದು ಹಾಗೂ ರೈತರ ಆರ್ಥಿಕ ಅಭಿವೃದ್ಧಿಗಾಗಿ ಪ್ರತಿ ಲೀಟರ್ ಹಾಲು ಹಾಗೂ ಮೊಸರಿನ ಮೇಲೆ 2 ರೂಪಾಯಿ ಹೆಚ್ಚಳ ಮಾಡುವುದಕ್ಕೆ ಕೆಎಂಎಫ್ ನಿರ್ಧರಿಸಿದೆ

ಸಮೃದ್ಧಿ ಹಾಲಿನ ದರ ಪ್ರತಿ ಲೀಟರ್‌ಗೆ 48 ರೂಪಾಯಿ ಇಂದ 50 ರೂಪಾಯಿಗೆ ಹೆಚ್ಚಳವಾಗಿದೆ. ಟೋನ್ಡ್‌ ಹಾಲಿನ ದರ 37ರೂಪಾಯಿ ಇಂದ 39 ರೂಪಾಯಿಗೆ ಏರಿಸಲಾಗಿದೆ. ಸ್ಪೆಷಲ್‌ ಹಾಲಿನ ದರ 43 ರೂಪಾಯಿ ಇಂದ 45 ರೂಪಾಯಿಗೆ ಏರಿಸಲಾಗಿದೆ. ಇನ್ನು ಮೊಸರಿನ ಬೆಲೆಯನ್ನು 45 ರೂಪಾಯಿ ಇಂದ 47 ರೂಪಾಯಿಗೆ ಏರಿಸಲಾಗಿದೆ. ಈ ಪರಿಷ್ಕೃತ ದರ ನಾಳೆಯಿಂದಲೇ(ನ.24) ಜಾರಿಗೆ ಬರಲಿದೆ. ನಂದಿನಿ ಟೋನ್ಡ್‌ ಹಾಲಿನ ದರ ಪ್ರಸ್ತುತ 37 ರೂಪಾಯಿ ಇದ್ದು ಪರಿಷ್ಕೃತ ದರ 39 ರೂಪಾಯಿ ಮಾಡಲಾಗಿದೆ.
ಹೋಮೋಜಿನೈಸ್ಡ್‌ ಟೋನ್ಡ್‌ ಹಾಲಿನ ದರ ಪ್ರಸ್ತುತ 38 ರೂಪಾಯಿ ಇದ್ದು ಪರಿಷ್ಕೃತ ದರ 40 ರೂಪಾಯಿ ಮಾಡಲಾಗಿದೆ. ಹೋಮೋಜಿನೈಸ್ಡ್‌ ಹಸುವಿನ ಹಾಲಿನ ದರ ಪ್ರಸ್ತುತ 42 ರೂಪಾಯಿ ಇದ್ದು ಪರಿಷ್ಕೃತ ದರ 44 ರೂಪಾಯಿ ಮಾಡಲಾಗಿದೆ.

ಸ್ಪೆಷಲ್‌ ಹಾಲಿನ ದರ ಪ್ರಸ್ತುತ 43 ರೂಪಾಯಿ ಇದ್ದು ಪರಿಷ್ಕೃತ ದರ 45 ರೂಪಾಯಿ ಮಾಡಲಾಗಿದೆ. ಶುಭಂ ಹಾಲಿನ ದರ ಪ್ರಸ್ತುತ 43 ರೂಪಾಯಿ ಇದ್ದು ಪರಿಷ್ಕೃತ ದರ 45 ರೂಪಾಯಿ ಮಾಡಲಾಗಿದೆ. ಹೋಮೋಜಿನೈಸ್ಡ್‌ ಸ್ಟ್ಯಾಂಡಡೈಸ್ಡ್ ಹಾಲಿನ ದರ ಪ್ರಸ್ತುತ 44 ರೂಪಾಯಿ ಇದ್ದು ಪರಿಷ್ಕೃತ ದರ 46 ರೂಪಾಯಿ ಮಾಡಲಾಗಿದೆ.

ಸಮೃದ್ಧಿ ಹಾಲಿನ ದರ ಪ್ರಸ್ತುತ 48 ರೂಪಾಯಿ ಇದ್ದು ಪರಿಷ್ಕೃತ ದರ 50 ರೂಪಾಯಿ ಮಾಡಲಾಗಿದೆ. ಸಂತೃಪ್ತಿ ಹಾಲಿನ ದರ ಪ್ರಸ್ತುತ 50 ರೂಪಾಯಿ ಇದ್ದು ಪರಿಷ್ಕೃತ ದರ 52 ರೂಪಾಯಿ ಮಾಡಲಾಗಿದೆ.

 

ವಿಳಾಸ

ಕರ್ನಾಟಕ ಸಹಕಾರಿ ಹಾಲು ಉತ್ಪಾದಕರ ಮಹಾಮಂಡಳಿ ನಿಯಮಿತ .
ಕಹಾಮ ಸಂಕೀರ್ಣ, ಅಂಚೆ ಪೆಟ್ಟಿಗೆ ಸಂಖ್ಯೆ- 2915,
ಡಿ. ಆರ್. ಕಾಲೇಜು ಅಂಚೆ, ಡಾ.ಎಂ.ಹೆಚ್.ಮರಿಗೌಡ ರಸ್ತೆ,
ಬೆಂಗಳೂರು-560029, ಕರ್ನಾಟಕ.

ದೂರವಾಣಿ

080-260 96800

ಸಹಾಯವಾಣಿ:

1800 425 8030 toll free 10.00AM - 5.30PM

(ಎರಡನೇ ಶನಿವಾರ, ನಾಲ್ಕನೇ ಶನಿವಾರ, ಭಾನುವಾರ ಹಾಗು ಇತರೆ ರಾಜ್ಯ ಸರ್ಕಾರ ರಜಾ ದಿನಗಳನ್ನು ಹೊರತು ಪಡಿಸಿ)

ನಂದಿನಿ ನೆರವು ದೂರವಾಣಿ ಸಂಖ್ಯೆ (24*7):

080-66660000

ಫಾಕ್ಸ್:: 080-255 36105