1800 425 8030 ಟೋಲ್ ಫ್ರೀ 10.00AM - 5.30PM
ಎರಡನೇ ಶನಿವಾರ, ಭಾನುವಾರ ಹಾಗೂ ಸರ್ಕಾರಿ ರಜಾ ದಿನಗಳನ್ನು ಹೊರತುಪಡಿಸಿ

ನಂದಿನಿ ಗುಡ್‌ಲೈಫ್ ಸುವಾಸಿತ ಹಾಲು ಪ್ರಪ್ರಥಮವಾಗಿ ಭಾರತೀಯ ರೈಲುಗಳು ಮತ್ತು ವಿಮಾನಗಳಿಗೆ ಸರಬರಾಜು ಮಾಡಿರುವ ಬಗ್ಗೆ.

Date: 
01-ಜುಲೈ-2022

ಸಂಖ್ಯೆಃ ಕಹಾಮ/ಮಾರುಕಟ್ಟೆ/ಜಾಹೀರಾತು/೨೦೨೨-೨೩                                                                                                                                         ದಿನಾಂಕಃ ೦೧.೦೭.೨೦೨೨ 
                                                                                                               -  : ಪತ್ರಿಕಾ ಪ್ರಕಟಣೆ : -

ವಿಷಯ: ನಂದಿನಿ ಗುಡ್‌ಲೈಫ್ ಸುವಾಸಿತ ಹಾಲು ಪ್ರಪ್ರಥಮವಾಗಿ ಭಾರತೀಯ ರೈಲುಗಳು ಮತ್ತು ವಿಮಾನಗಳಿಗೆ ಸರಬರಾಜು 
        ಮಾಡಿರುವ ಬಗ್ಗೆ.

ಕೆಎಂಎಫ್ ನ ಸದಸ್ಯ ಜಿಲ್ಲಾ ಹಾಲು ಒಕ್ಕೂಟವಾದ ಹಾಸನ ಜಿಲ್ಲಾ ಸಹಕಾರಿ ಹಾಲು ಒಕ್ಕೂಟದಲ್ಲಿ ಸುಮಾರು ೧೭೦ ಕೋಟಿ ರೂ.ಗಳ ಬಂಡವಾಳದಲ್ಲಿ ದಕ್ಷಿಣ ಭಾರತದಲ್ಲಿಯೇ ಮೊಟ್ಟ ಮೊದಲ ಸಂಪೂರ್ಣ ಸ್ವಯಂ ಚಾಲಿತ ವಿದ್ಯುನ್ಮಾನ ನಿಯಂತ್ರಿತ ಆತ್ಯಾಧುನಿಕ ತಂತ್ರಜ್ಞಾನ ಅಳವಡಿಸಿರುವ ಪೆಟ್‌ಬಾಟಲ್ ಬೃಹತ್ ಸ್ಥಾವರÀವನ್ನು ಸ್ಥಾಪಿಸಲಾಗಿದೆ. ಫೆಬ್ರವರಿ-೨೦೨೨ ರಿಂದ ಉತ್ಪಾದನೆ ಕಾರ್ಯವನ್ನು ಪ್ರಾರಂಭಿಸಲಾಗಿದ್ದು. ದಿನವಹಿ ೫.೦ ಲಕ್ಷ ಬಾಟಲ್‌ಗಳವರೆಗೆ ಉತ್ಪಾದನೆ ಮಾಡುತ್ತಿದ್ದು, ಘಟಕವು ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತ್ತಿದೆ. ಈ ಸ್ವಯಂ ಚಾಲಿತ ಸ್ಥಾವರದಲ್ಲಿ “ನಂದಿನಿ ಗುಡ್‌ಲೈಫ್” ಉಪ ಬ್ರಾö್ಯಂಡ್ ನಲ್ಲಿ ಬಾದಾಮಿ/ಪಿಸ್ತಾ/ಸ್ಟಾçಬೆರಿ ಸುವಾಸಿತ ಹಾಲು, ಮಾವಿನ ಹಣ್ಣಿನ/ಸಾದಾ ಲಸ್ಸಿ, ಚಾಕೋಲೇಟ್/ವೆನಿಲ್ಲಾ/ಬನಾನಾ  ಮಿಲ್ಕ್ ಶೇಕ್, ಮಸಾಲ ಮಜ್ಜಿಗೆ ಸಿದ್ಧಪಡಿಸಿ ಕರ್ನಾಟಕ ರಾಜ್ಯ ಹಾಗೂ ಹೊರರಾಜ್ಯಗಳಲ್ಲಿ ಮಾರಾಟ ಮಾಡಲಾಗುತ್ತಿದ್ದು, ನಂದಿನಿ ಸುವಾಸಿತ ಹಾಲಿನ ಮಾರುಕಟ್ಟೆಯನ್ನು ದೇಶಾದ್ಯಾಂತ ವೇಗವಾಗಿ ವಿಸ್ತರಿಸಲಾಗುತ್ತಿದ್ದು, ದೇಶದ ಗಡಿ ಭಾಗದ ಪ್ರದೇಶಗಳಾದ ಲೇ & ಲಡಾಕ್ ನವರೆಗೂ ಮಾರಾಟ ಜಾಲವನ್ನು ವಿಸ್ತರಿಸಲಾಗಿದ್ದು, ಗ್ರಾಹಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. 

ಕಹಾಮವು ನೂತನ ಉತ್ಪನ್ನಗಳ ಮಾರಾಟ ಅಭಿವೃದ್ಧಿಗೆ ಹೊಸ ಆಯಾಮಗಳನ್ನು ಅಳವಡಿಸಿಕೊಂಡು ಪ್ರಪ್ರಥಮವಾಗಿ ಭಾರತೀಯ ರೈಲ್ವೆ ಮತ್ತು ವಿಮಾನಯಾನದ ಸಂಸ್ಥೆಯ ಅಧಿಕೃತ ಕೇಟರ‍್ಸ್  ರನ್ನು ಸಂಪರ್ಕಿಸಿ  ನಂದಿನಿ ಗುಡ್‌ಲೈಫ್ ಸುವಾಸಿತ ಹಾಲು ಮತ್ತು ಮಿಲ್ಕ್ ಶೇಕ್‌ಗಳಿಗೆ ಬೇಡಿಕೆಯನ್ನು ಯಶಸ್ವಿಯಾಗಿ ಪಡೆಯಲಾಗಿದೆ. ಪ್ರಾರಂಭಿಕವಾಗಿ ಮಾಹೆಯಾನ ೩.೦ ಲಕ್ಷ ಲೀ. ಬೇಡಿಕೆ ನೀಡಿದ್ದು ಬೇಸಿಗೆ ಕಾಲದಲ್ಲಿ ೫.೦ ರಿಂದ ೬.೦ ಲಕ್ಷ ಲೀ. ಗಳಿಗೆ (೩೦ ಲಕ್ಷ ಬಾಟಲ್) ಬೇಡಿಕೆ ಇರುತ್ತದೆ.

ಈ ಹಿನ್ನೆಲೆಯಲ್ಲಿ, ದಿನಾಂಕ: ೦೧.೦೭.೨೦೨೨ ರಂದು ಮಾನ್ಯ ಶಾಸಕರು, ಹೊಳೇನರಸಿಪುರ ಕ್ಷೇತ್ರ ಹಾಗೂ ಅಧ್ಯಕ್ಷರು, ಹಾಸನ ಹಾಲು ಒಕ್ಕೂಟ ರವರಾದ ಶ್ರೀ ಹೆಚ್. ಡಿ. ರೇವಣ್ಣ ನವರು ರೈಲ್ವೇ ಸರಬರಾಜಿಗಾಗಿ ೫ ಸುವಾಸಿತ ಹಾಲಿನ ವಾಹನಗಳಿಗೆ (೭೫೦೦೦ ಲೀಟರ್ /೩.೭೫ ಲಕ್ಷ ಬಾಟಲ್) ಚಾಲನೆ ನೀಡಿದರು. ಈ ೫ ವಾಹನಗಳ ಮುಂಬೈ, ಚೆನ್ನೆöÊ, ಪುಣೆ ಮತ್ತು ಬೆಂಗಳೂರು ರೈಲ್ವೆ ಕೇಟರಿಂಗ್ ಡಿಪೋಗಳಿಗೆ ತಲುಪಿ ಅಲ್ಲಿಂದ ರೈಲು ಗಳಲ್ಲಿ ಲಭ್ಯತೆ ಮಾಡಲಾಗುವುದು. 

ಮುಂದುವರೆದು, ಅದೇ ರೀತಿ ಬೆಂಗಳೂರು ವಿಮಾನ ನಿಲ್ದಾಣದಿಂದ ಗಿisಣಚಿಡಿಚಿ & ಂiಡಿ Iಟಿಜiಚಿ ಸಂಸ್ಥೆಗಳ ವಿಮಾನÀಗಳ ಫ್ಲೆöÊಟ್ ಕೇಟರಿಂಗ್‌ನಲ್ಲೂ ಸಹ  ಪೆಟ್ ಬಾಟಲ್ ಹಾಲಿನ ಉತ್ಪನ್ನಗಳನ್ನು ಸರಬರಾಜಿಗೆ ಕ್ರಮವಿಡಲಾಗಿದೆ. ಸದರಿ ವಾಹನಕ್ಕೆ  ಕೆಎಂಎಫ್‌ನ ವ್ಯವಸ್ಥಾಪಕ ನಿರ್ದೇಶಕರಾದ ಶ್ರೀ. ಬಿ.ಸಿ. ಸತೀಶ್ ಕೆಸಿಎಸ್ ರವರು ದಿನಾಂಕ: ೦೧.೦೭.೨೦೨೨ ರಂದು ಹಸಿರು ನಿಶಾನೆ ತೋರುವ ಮೂಲಕ ಚಾಲನೆ ನೀಡಿದರು.

ಈ ಮೇಲಿನ ಮಾಹಿತಿಯನ್ನು ತಮ್ಮ ಪತ್ರಿಕೆ ಹಾಗು ವಾಹಿನಿಗಳ ಮೂಲಕ ಸಾರ್ವಜನಿಕರ ಗಮನಕ್ಕೆ ತರಲು ಈ ಮೂಲಕ ಕೋರಿದೆ.

ಕರ್ನಾಟಕ ಹಾಲು ಮಹಾಮಂಡಳಿ ಪರವಾಗಿ,
-ಸಹಿ-
ನಿರ್ದೇಶಕರು (ಮಾರುಕಟ್ಟೆ)

ವಿಳಾಸ

ಕರ್ನಾಟಕ ಸಹಕಾರಿ ಹಾಲು ಉತ್ಪಾದಕರ ಮಹಾಮಂಡಳಿ ನಿಯಮಿತ .
ಕಹಾಮ ಸಂಕೀರ್ಣ, ಅಂಚೆ ಪೆಟ್ಟಿಗೆ ಸಂಖ್ಯೆ- 2915,
ಡಿ. ಆರ್. ಕಾಲೇಜು ಅಂಚೆ, ಡಾ.ಎಂ.ಹೆಚ್.ಮರಿಗೌಡ ರಸ್ತೆ,
ಬೆಂಗಳೂರು-560029, ಕರ್ನಾಟಕ.

ದೂರವಾಣಿ

080-260 96800

ಸಹಾಯವಾಣಿ:

1800 425 8030 toll free 10.00AM - 5.30PM

(ಎರಡನೇ ಶನಿವಾರ, ನಾಲ್ಕನೇ ಶನಿವಾರ, ಭಾನುವಾರ ಹಾಗು ಇತರೆ ರಾಜ್ಯ ಸರ್ಕಾರ ರಜಾ ದಿನಗಳನ್ನು ಹೊರತು ಪಡಿಸಿ)

ನಂದಿನಿ ನೆರವು ದೂರವಾಣಿ ಸಂಖ್ಯೆ (24*7):

080-66660000

ಫಾಕ್ಸ್:: 080-255 36105