1800 425 8030 ಟೋಲ್ ಫ್ರೀ 10.00AM - 5.30PM
ಎರಡನೇ ಶನಿವಾರ, ಭಾನುವಾರ ಹಾಗೂ ಸರ್ಕಾರಿ ರಜಾ ದಿನಗಳನ್ನು ಹೊರತುಪಡಿಸಿ

Inauguration of many new projects of KMF and launch of new products

Date: 
29-ಸೆಪ್ಟೆಂಬರ್ -2021

                                      -:ಪತ್ರಿಕಾ ಪ್ರಕಟಣೆ:- 
ವಿಷಯ :  1) ನೂತನ ಯೋಜನೆಗಳ ಸಾಮೂಹಿಕ ಉದ್ಘಾಟನಾ ಸಮಾರಂಭ ಕಾರ್ಯಕ್ರಮ.

             2) “ನಂದಿನಿ” ಹೊಸ ಉತ್ಪನ್ನಗಳ ಬಿಡುಗಡೆ.

            3) “ನಂದಿನಿ” ಎಮ್ಮೆ-ಪಶು ಆಹಾರ ಬಿಡುಗಡೆ.
ಕರ್ನಾಟಕ ಹಾಲು ಮಹಾಮಂಡಳಿಯು ರಾಜ್ಯದ ಎಲ್ಲಾ ವರ್ಗದ ಗ್ರಾಹಕರಿಗೆ ಕೈಗೆಟುಕುವ ದರದಲಿ ್ಲರುಚಿ ಶುಚಿಯಾದ ಹಾಲು ಮತ್ತು ಹಾಲಿನ ಉತ್ಪನ್ನಗಳನ್ನು “ನಂದಿನಿ” ಬ್ಯ್ರಾಂಡ್ ಅಡಿಯಲ್ಲಿ ಕಳೆದ 40 ವರ್ಷಗಳಿಂದ ಒದಗಿsಸುತ್ತಾ ಬರುತ್ತಿದ್ದು, ರಾಜ್ಯ ಮತ್ತು ಹೊರ ರಾಜ್ಯಗಳಲ್ಲಿ ಗ್ರ್ರಾಹಕರ ಆಯ್ಕೆಯ ನೆಚ್ಚಿನ ಬ್ಯ್ರಾಂಡ್ ಆಗಿದೆ. ಉತ್ಕøಷ್ಟ ಗುಣಮಟ್ಟದ ಉತ್ಪನ್ನಗಳ ಜೊತೆಗೆ ಕಾಲಕಾಲಕ್ಕೆ ಗ್ರಾಹಕರಿಗೆ ವಿವಿಧ ಕೊಡುಗೆಗಳನ್ನು ಸಹ ನೀಡುತ್ತಾ ಬರುತ್ತಿದ್ದು, ಕರ್ನಾಟಕ ಜನತೆಯ ಅಚ್ಚುಮೆಚ್ಚಿನ ಬ್ಯ್ರಾಂಡ್‍ಆಗಿದೆ.

ಕರ್ನಾಟಕ ಹಾಲು ಮಹಾಮಂಡಳವು  ನೂತನವಾಗಿ ವಿವಿಧ ಜಿಲ್ಲೆಗಳಲ್ಲಿ ಹಲವು ಅಭಿವೃದ್ದಿ ಯೋಜನೆಗಳನ್ನು ಕೈಗೊಂಡಿದ್ದು, ಯೋಜನೆಗಳ ಸಾಮೂಹಿಕ ಉದ್ಘಾಟನಾ ಕಾರ್ಯಕ್ರಮವನ್ನು ದಿನಾಂಕ:29.09.2021, ಬುಧವಾರ ಬೆಳಿಗ್ಗೆ 11.30ಕ್ಕೆ ವೈಟ್ ಪೆಟಲ್ಸ್, ಅರಮನೆ ಮೈದಾನ, ಬೆಂಗಳೂರಿನಲ್ಲಿ ಹಮ್ಮಿಕೊಂಡಿದ್ದು. ರಾಜ್ಯದ ಸನ್ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಬಸವರಾಜು ಬೊಮ್ಮಾಯಿ ರವರು ಯೋಜನೆಗಳನ್ನು ಉದ್ಘಾಟಿಸಲಿದ್ದಾರೆ.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಶ್ರೀ ಪ್ರಹ್ಲಾದ್ ಜೋಷಿ (ಮಾನ್ಯ ಕೇಂದ್ರ ಕಲ್ಲಿದ್ದಲು, ಗಣಿ ಮತ್ತು ಸಂಸದೀಯ ವ್ಯವಹಾರಗಳ ಸಚಿವರು ) ರವರು, ಶ್ರೀಮತಿ ನಿರ್ಮಲಾ ಸೀತಾರಾಮನ್ ( ಮಾನ್ಯ ಕೇಂದ್ರ ಹಣಕಾಸು ಮತ್ತು ಕಾರ್ಪೋರೇಟ್ ವ್ಯವಹಾರಗಳ ಸಚಿವರು ) ರವರು, ಶ್ರೀ ಎಂ.ರಾಜೀವ್ ಚಂದ್ರಶೇಖರ್ ( ಮಾನ್ಯ ಕೇಂದ್ರ ಕೌಶಲ್ಯಾಭಿವೃದ್ದಿ ಮತ್ತು ಉದ್ಯನಶೀಲತೆ ರಾಜ್ಯ ಸಚಿವರು ) ರವರು, ಶ್ರೀ ಹೆಚ್.ಡಿ.ದೇವೇಗೌಡ (ಮಾನ್ಯ ಮಾಜಿ ಪ್ರಧಾನಮಂತ್ರಿಗಳು ಹಾಗು ಸಂಸದರು ) ರವರು ಪಾಲ್ಗೋಳ್ಳಲಿದ್ದಾರೆ.

ಸನ್ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಬಸವರಾಜು ಬೊಮ್ಮಾಯಿ ರವರ ಅಮೃತ ಹಸ್ತದಿಂದ ಈ ಕೆಳಕಂಡ ಯೋಜನೆಗಳು ಉದ್ಘಾಟನೆಗೊಳ್ಳಲಿದೆ.

1)     ನಂದಿನಿ ಹೈಟೆಕ್ ಮೆಗಾ ಹಾಲಿನ ಪುಡಿ ಉತ್ಪಾದನಾ ಘಟಕ (ಕಣ್ವ, ರಾಮನಗರ ಜಿಲ್ಲೆ).

2)   ಪಶು ಆಹಾರ ಉತ್ಪಾದನಾ ಘಟಕ-2 (ಧಾರವಾಡ).

3)   ಪಶು ಆಹಾರ ಉತ್ಪಾದನಾ ಘಟಕ-2  (ಗುಬ್ಬಿ, ತುಮಕೂರು ಜಿಲ್ಲೆ).

4)   ಹೈಟೆಕ್ ಬುಲ್ ಮದರ್ ಫಾರಂ ಮತ್ತು ಮೇವು ಅಭಿವೃದ್ದಿ ಕೇಂದ್ರ (ಹೆಸರಘಟ್ಟ, ಬೆಂಗಳೂರು).

5)   ರಾಜ್ಯ ಕೇಂದ್ರೀಯ ಪ್ರಯೋಗಾಲಯ ಕೆ.ಎಂ.ಎಫ್ ಸಂಕೀರ್ಣ (ಬೆಂಗಳೂರು).

6)   ಕೆ.ಎಂ.ಎಫ್ ತರಭೇತಿ ಕೇಂದ್ರ (ಕಲಬುರ್ಗಿ ಡೇರಿ ಆವರಣ).

7)   ಹಾಸನ ಪಶು ಆಹಾರ ಘಟಕದಲ್ಲಿ ಗೋದಾಮು, ಆಡಳಿತ ಕಛೇರಿ ಮತ್ತು ಇತರೆ ಅಭಿವೃದ್ದಿ ಕಾಮಗಾರಿಗಳು

8)   ರಾಜಾನುಕುಂಟೆ ಪಶು ಆಹಾರ ಘಟಕದಲ್ಲಿ ಗೋದಾಮು, ಆಡಳಿತ ಕಛೇರಿ ಮತ್ತು ಇತರೆ ಅಭಿವೃದ್ದಿ ಕಾಮಗಾರಿಗಳು.

9)   ಶಿಕಾರಿಪುರ ಪಶು ಆಹಾರ ಘಟಕದಲ್ಲಿ ಕಾಕಂಬಿ ಶೇಖರಣಾ ಟ್ಯಾಂಕ್.

10) ಬೆಣ್ಣೆ ದಾಸ್ತಾನಿನ ಡೀಪ್ ಪ್ರೀಜರ್ ಘಟಕ ಚಳ್ಳಘಟ್ಟ (ಬೆಂಗಳೂರು).
ಮುಂದುವರೆದು,”ನಂದಿನಿ” ಉತ್ಪನ್ನಗಳ ಶ್ರೇಣಿಗೆ ಹೊಸದಾಗಿ ನಂದಿನಿ ಶ್ರೀಖಂಡ್‍ನಲ್ಲಿ ಗ್ರೀನ್ ಆಪಲ್, ಕಿವಿ ಹಣ್ಣು, ಬಟರ್ ಸ್ಕಾಚ್ ಮಾದರಿಗಳಲ್ಲಿ ಮಾರುಕಟ್ಟೆಗೆ ಬಿಡುಗಡೆಗೊಳ್ಳಲಿದ್ದು, ಜೊತೆಗೆ ನಂದಿನಿ ಕರದಂಟು, ನಂದಿನಿ ಗೋಡಂಬಿ ಶಕ್ತಿ (ಕಾಜೂ ಕಟ್ಲಿ), ನಂದಿನಿ ಲಡಗಿ ಲಡ್ಡು, ನಂದಿನಿ ಪಿಂಕ್ ಗಾವಾ ಕ್ಯಾಂಡಿ, ನಂದಿನಿ ಸಕ್ಕರೆ ರಹಿತ ಐಸ್ ಕ್ರೀಮ್, ನಂದಿನಿ ರಾಗಿ ಬೈಟ್ ಕುಕ್ಕೀಸ್ ಉತ್ಪನ್ನಗಳು ಸಹ ಮಾರುಕಟ್ಟೆಗೆ ಬರಲಿದ್ದು, ಈ ಎಲ್ಲಾ ನೂತನ ಉತ್ಪನ್ನಗಳನ್ನು ಮಾನ್ಯ ಸಹಕಾರ ಸಚಿವರಾದ ಶ್ರೀ ಎಸ್.ಟಿ.ಸೋಮಶೇಖರ್ ರವರು ಬಿಡುಗಡೆ ಮಾಡಲಿದ್ದಾರೆ.
ಪಶು ಆಹಾರ ಸಂಬಂಧ ಎಮ್ಮೆಗಳಿಗಾಗಿ “ನಂದಿನಿ” ಎಮ್ಮೆ-ಪಶು ಆಹಾರವನ್ನು ಮಾನ್ಯ ಪಶು ಸಂಗೋಪನೆ ಸಚಿವರಾದ ಶ್ರೀ ಪ್ರಭು ಬಿ.ಚವ್ಹಾಣ್ ರವರು ಬಿಡುಗಡೆ ಮಾಡಲಿದ್ದಾರೆ.

ಡಾ:ಸಿ.ಎನ್.ಅಶ್ವತ್ಥ ನಾರಾಯಣ (ಮಾನ್ಯ ಉನ್ನತ ಶಿಕ್ಷಣ, ಐಟಿ,ಬಿಟಿ ಮತ್ತು ಎಸ್&ಟಿ ಹಾಗು ಕೌಶಲ್ಯಾಭಿವೃದ್ದಿ,  ಉದ್ಯಮಶೀಲತೆ ಹಾಗು ಜೀವನೋಪಾಯ ಸಚಿವರು) ರವರ ಅಧ್ಯಕ್ಷತೆಯಲ್ಲಿ ಹಾಗು ಶ್ರೀ ಬಾಲಚಂದ್ರ ಲ.ಜಾರಕಿಹೊಳಿ (ಮಾನ್ಯ ಅಧ್ಯಕ್ಷರು, ಕಹಾಮ ಹಾಗು ಶಾಸಕರು, ಅರಭಾವಿ ಕ್ಷೇತ್ರ) ರವರ ಘನ ಉಪಸ್ಥಿತಿಯಲ್ಲಿ ಸದರೀ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.
ಈ ಹಿನ್ನಲೆಯಲ್ಲಿ, ಸದರೀ ಕಾರ್ಯಕ್ರಮಕ್ಕೆ ತಮ್ಮನ್ನು ಆಹ್ವಾನಿಸುತ್ತಾ, ಸದರೀ ಕಾರ್ಯಕ್ರಮದ ಸಂಬಂಧ,      ತಮ್ಮ ಪತ್ರಿಕೆ ಹಾಗು ವಾಹಿನಿಗಳ ಮೂಲಕ ಸಾರ್ವಜನಿಕರ ಮಾಹಿತಿಗಾಗಿ ತರಲು ಈ ಮೂಲಕ ಕೋರಿದೆ.

                                                                         “ಪ್ರತಿ ಸಮಾರಂಭ, ಪ್ರತಿ ಮನೆಗಳಲ್ಲೂ ನಂದಿನಿ  ಉತ್ಪನ್ನಗಳಿರಲಿ,

                                                                          ರಾಜ್ಯದ ಬೆನ್ನೆಲುಬಾದರೈತರ ಬಾಳು ಮತ್ತಷ್ಟು ಸಿಹಿಯಾಗಲಿ”

ವಿಳಾಸ

ಕರ್ನಾಟಕ ಸಹಕಾರಿ ಹಾಲು ಉತ್ಪಾದಕರ ಮಹಾಮಂಡಳಿ ನಿಯಮಿತ .
ಕಹಾಮ ಸಂಕೀರ್ಣ, ಅಂಚೆ ಪೆಟ್ಟಿಗೆ ಸಂಖ್ಯೆ- 2915,
ಡಿ. ಆರ್. ಕಾಲೇಜು ಅಂಚೆ, ಡಾ.ಎಂ.ಹೆಚ್.ಮರಿಗೌಡ ರಸ್ತೆ,
ಬೆಂಗಳೂರು-560029, ಕರ್ನಾಟಕ.

ದೂರವಾಣಿ

080-260 96800

ಸಹಾಯವಾಣಿ:

1800 425 8030 toll free 10.00AM - 5.30PM

(ಎರಡನೇ ಶನಿವಾರ, ನಾಲ್ಕನೇ ಶನಿವಾರ, ಭಾನುವಾರ ಹಾಗು ಇತರೆ ರಾಜ್ಯ ಸರ್ಕಾರ ರಜಾ ದಿನಗಳನ್ನು ಹೊರತು ಪಡಿಸಿ)

ನಂದಿನಿ ನೆರವು ದೂರವಾಣಿ ಸಂಖ್ಯೆ (24*7):

080-66660000

ಫಾಕ್ಸ್:: 080-255 36105