1800 425 8030 ಟೋಲ್ ಫ್ರೀ 10.00AM - 5.30PM
ಎರಡನೇ ಶನಿವಾರ, ಭಾನುವಾರ ಹಾಗೂ ಸರ್ಕಾರಿ ರಜಾ ದಿನಗಳನ್ನು ಹೊರತುಪಡಿಸಿ

Nandini milk powder exported to Bangladesh

Date: 
15-ಜೂನ್ -2021

-: ಪತ್ರಿಕಾ ಪ್ರಕಟಣೆ :-

ವಿಷಯ: ಪ್ರಪ್ರಥಮ ಬಾರಿಗೆ ಕರ್ನಾಟಕ ಹಾಲು ಮಹಾಮಂಡಳಿಯ ಸದಸ್ಯ ಹಾಲು ಒಕ್ಕೂಟವಾದ ಬೆಂಗಳೂರು ಹಾಲು ಒಕ್ಕೂಟದ ಘಟಕ ನಂದಿನಿ ಹಾಲು ಉತ್ಪನ್ನ ಕಾಂಪ್ಲೆಕ್ಸ್, ಕನಕಪುರದಿಂದ 500 ಮೆ.ಟನ್ ನಂದಿನಿ ಕೆನೆರಹಿತ ಹಾಲಿನ ಪುಡಿಯನ್ನು ಬಾಂಗ್ಲಾದೇಶಕ್ಕೆ ರಫ್ತು ಮಾಡಲು ಚಾಲನೆ:-
 
ಕರ್ನಾಟಕ ಹಾಲು ಮಹಾಮಂಡಳಿಯು ರಾಜ್ಯದ ಎಲ್ಲಾ ವರ್ಗದ ಗ್ರಾಹಕರಿಗೆ ಕೈಗೆಟಕುವ ದರದಲ್ಲಿ ಉತ್ಕøಷ್ಟ ಗುಣಮಟ್ಟದ ರುಚಿ-ಶುಚಿಯಾದ ನಂದಿನಿ ಹಾಲಿನ ಉತ್ಪನ್ನಗಳನ್ನು “ನಂದಿನಿ ಬ್ರ್ಯಾಂಡಿನ ಅಡಿಯಲ್ಲಿ ಉತ್ಪಾದಿಸಿ, ಮಾರುಕಟ್ಟೆಗೆ ಒದಗಿಸಿ, ನಂದಿನಿಯು ಸದಾ ಗ್ರಾಹಕರ ನೆಚ್ಚಿನ ಆಯ್ಕೆಯ ಬ್ರ್ಯಾಂಡ್ ಆಗಿದೆ.
 
ಪ್ರಸ್ತುತ, ಕರ್ನಾಟಕ ಹಾಲು ಮಹಾಮಂಡಳಿಯು ತನ್ನ ಸದಸ್ಯ ಹಾಲು ಒಕ್ಕೂಟ ಹಾಗೂ ಘಟಕಗಳಲ್ಲಿ ಉತ್ಪಾದಿಸಲಾಗುತ್ತಿರುವ ಕೆನೆರಹಿತ ಹಾಲಿನ ಪುಡಿ, ಯುಹೆಚ್‍ಟಿ ಟೆಟ್ರಾಪ್ಯಾಕ್ ಹಾಲು, ತುಪ್ಪ ಹಾಗೂ ಬೆಣ್ಣೆಯನ್ನು ಬಾಂಗ್ಲಾದೇಶ್, ಆಫ್ಘಾನಿಸ್ತಾನ್, ಸಿಂಗಾಪೂರ್, ಭೂತಾನ್, ಮಿಡಲ್ ಈಸ್ಟ್ ದೇಶಗಳು, ಆಸ್ಟ್ರೇಲಿಯಾ ಹಾಗೂ ಯುಎಸ್‍ಎ ದೇಶಗಳಿಗೆ ರಫ್ತು ಮಾಡಲಾಗುತ್ತಿದೆ. ಇತ್ತೀಚಿಗೆ ಯುಎಸ್‍ಎಗೆ ನಂದಿನಿ ತುಪ್ಪವನ್ನು 1 ಲೀಟರ್ ಟಿನ್‍ಗಳಲ್ಲಿ ರಫ್ತು ಮಾಡಲಾಗಿದ್ದು, ಸದರಿ ಉತ್ಪನ್ನಕ್ಕೆ ಯುಎಸ್‍ಎ ಗ್ರಾಹಕರಿಂದ  ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ನಂದಿನಿ ಸಿಹಿ ಉತ್ಪನ್ನಗಳನ್ನು ಸಹ ಆಮದು ಮಾಡಿಕೊಳ್ಳಲು ಬೇಡಿಕೆ ಬರುತ್ತಿದ್ದು, ಮುಂದಿನ ದಿನಗಳಲ್ಲಿ ನಂದಿನಿ ಸಿಹಿ ಉತ್ಪನ್ನಗಳನ್ನು ರಫ್ತು ಮಾಡಲು ಹಾಗೂ ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ನಂದಿನಿ ಉತ್ಪನ್ನಗಳನ್ನು ರಫ್ತು ಮಾಡಲು ಆದ್ಯತೆ ನೀಡಲಾಗುತ್ತಿದೆ. ನಂದಿನಿ ಉತ್ಪನ್ನಗಳಿಗೆ ವಿದೇಶಗಳಲ್ಲಿಯೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿರುವುದು ನಂದಿನಿ ಬ್ರ್ಯಾಂಡ್ ಇಮೇಜ್ ಗೆ ಒಂದು ಹೆಗ್ಗಳಿಕೆಯಾಗಿದೆ.
 
ಕರ್ನಾಟಕ ಹಾಲು ಮಹಾಮಂಡಳಿಯ ಸದಸ್ಯ ಹಾಲು ಒಕ್ಕೂಟವಾದ ಬೆಂಗಳೂರು ಸಹಕಾರಿ ಹಾಲು ಒಕ್ಕೂಟವು, ಕರ್ನಾಟಕ ಹಾಲು ಮಹಾಮಂಡಳಿಯ ಹಾಲು ಒಕ್ಕೂಟಗಳಲ್ಲಿಯೇ ಅತೀ ಹೆಚ್ಚು ಹಾಲು ಶೇಖರಣೆ ಹಾಗೂ ಮಾರಾಟ ಮಾಡುವ ದೊಡ್ಡ ಹಾಲು ಒಕ್ಕೂಟವಾಗಿರುತ್ತದೆ. ಬೆಂಗಳೂರು ಹಾಲು ಒಕ್ಕೂಟದ ಅಂಗ ಘಟಕವಾದ ನಂದಿನಿ ಹಾಲು ಉತ್ಪನ್ನ ಕಾಂಪ್ಲೆಕ್ಸ್, ಶಿವನಹಳ್ಳಿ, ಕನಕಪುರ ತಾಲ್ಲೂಕು, ರಾಮನಗರ ಜಿಲ್ಲೆಯಲ್ಲಿ ಡಿಸೆಂಬರ್-2018 ರಲ್ಲಿ ಲೋಕಾರ್ಪಣೆಗೊಂಡು, ದಿನವಹಿ 7.0 ಲಕ್ಷ ಲೀಟರ್ ಹಾಲನ್ನು ಸ್ವೀಕರಿಸಿ, ಸಂಸ್ಕರಿಸುವ ಸಾಮರ್ಥ್ಯವನ್ನು ಹೊಂದಿದೆ. ಸದರಿ ಡೇರಿ ಘಟಕದಲ್ಲಿ ದಿನನಿತ್ಯ ಸರಾಸರಿ 35 ಮೆ.ಟನ್ ಹಾಲಿನ ಪುಡಿ, 35 ಮೆ.ಟನ್ ಚೀಸ್, 1.0 ಲಕ್ಷ ಲೀಟರ್ ಯುಹೆಚ್‍ಟಿ ಫ್ಲೆಕ್ಸಿ, 1.5 ಲಕ್ಷ ಲೀಟರ್ ಸ್ಯಾಚೆ ಹಾಲು, 50000 ಕೆಜಿ ಮೊಸರು, 2 ಮೆ.ಟನ್ ತುಪ್ಪ 20 ಮೆ.ಟನ್ ಬೆಣ್ಣೆಯನ್ನು ಉತ್ಪಾದಿಸುವ ಯಂತ್ರೋಪಕರಣಗಳನ್ನು ಅಳವಡಿಸಲಾಗಿರುತ್ತದೆ.  
 
        ಪ್ರಸ್ತುತ, ಬಾಂಗ್ಲಾದೇಶದಿಂದ 500 ಮೆ.ಟನ್ ನಂದಿನಿ ಕೆನೆರಹಿತ ಹಾಲಿನ ಪುಡಿಗೆ ಬೇಡಿಕೆ ಬಂದಿದ್ದು, ದಿನಾಂಕ:15.06.2021 ರಂದು ಪ್ರಪ್ರಥಮ ಬಾರಿಗೆ ಬೆಂಗಳೂರು ಹಾಲು ಒಕ್ಕೂಟದ ಅಂಗ ಘಟಕವಾದ ಹಾಗೂ ಇತ್ತೀಚೆಗೆ ರಫ್ತು ಪರವಾನಗಿಯನ್ನು ಪಡೆಯಲಾಗಿರುವ ನಂದಿನಿ ಹಾಲು ಉತ್ಪನ್ನ ಕಾಂಪ್ಲೆಕ್ಸ್, ಕನಕಪುರದಿಂದ ಬೆಂಗಳೂರು ಹಾಲು ಒಕ್ಕೂಟದ ಅಧ್ಯಕ್ಷರು ಹಾಗೂ ಆಡಳಿತ ಮಂಡಲಿ ನಿರ್ದೇಶಕರುಗಳು, ಕೆಎಮ್‍ಎಫ್ ವ್ಯವಸ್ಥಾಪಕ ನಿರ್ದೇಶಕರಾದ ಶ್ರೀ.ಬಿ.ಸಿ.ಸತೀಶ್ ಕೆ.ಸಿ.ಎಸ್ ರವರು, ಮಾರುಕಟ್ಟೆ ವಿಭಾಗದ ನಿರ್ದೇಶಕರಾದ ಶ್ರೀ.ಎಂ.ಟಿ.ಕುಲಕರ್ಣಿ ರವರು, ಬೆಂಗಳೂರು ಹಾಲು ಒಕ್ಕೂಟದ ಕಾರ್ಯನಿರ್ವಾಹಕ ನಿರ್ದೇಶಕರು  ಹಾಗೂ ಹಿರಿಯ ಅಧಿಕಾರಿಗಳು ಹಸಿರು ನಿಶಾನೆ ತೋರಿಸುವ ಮೂಲಕ ರಫ್ತುಗೆ ಚಾಲನೆ ನೀಡಲಾಯಿತು.
 

ವಿಳಾಸ

ಕರ್ನಾಟಕ ಸಹಕಾರಿ ಹಾಲು ಉತ್ಪಾದಕರ ಮಹಾಮಂಡಳಿ ನಿಯಮಿತ .
ಕಹಾಮ ಸಂಕೀರ್ಣ, ಅಂಚೆ ಪೆಟ್ಟಿಗೆ ಸಂಖ್ಯೆ- 2915,
ಡಿ. ಆರ್. ಕಾಲೇಜು ಅಂಚೆ, ಡಾ.ಎಂ.ಹೆಚ್.ಮರಿಗೌಡ ರಸ್ತೆ,
ಬೆಂಗಳೂರು-560029, ಕರ್ನಾಟಕ.

ದೂರವಾಣಿ

080-260 96800

ಸಹಾಯವಾಣಿ:

1800 425 8030 toll free 10.00AM - 5.30PM

(ಎರಡನೇ ಶನಿವಾರ, ನಾಲ್ಕನೇ ಶನಿವಾರ, ಭಾನುವಾರ ಹಾಗು ಇತರೆ ರಾಜ್ಯ ಸರ್ಕಾರ ರಜಾ ದಿನಗಳನ್ನು ಹೊರತು ಪಡಿಸಿ)

ನಂದಿನಿ ನೆರವು ದೂರವಾಣಿ ಸಂಖ್ಯೆ (24*7):

080-66660000

ಫಾಕ್ಸ್:: 080-255 36105