1800 425 8030 toll free 10.00AM - 5.30PM
Except on Second Saturday,Sunday & GOVT.Holidays

ಕೆಎಂಎಫ್‌ನ ನಿವೃತ್ತ ಹಿರಿಯ ಅಧಿಕಾರಿ ಶ್ರೀ ಡಾ.ಡಿ.ಎನ್ ಹೆಗಡೆಯವರಿಗೆ ‘ಸಹಕಾರ ರತ್ನ’ ಪ್ರಶಸ್ತಿ ಲಭ್ಯವಾಗಿರುವ ಬಗ್ಗೆ.

Date: 
20-Mar-2022

ವಿಷಯ: ಕೆಎಂಎಫ್‌ನ ನಿವೃತ್ತ ಹಿರಿಯ ಅಧಿಕಾರಿ ಶ್ರೀ ಡಾ.ಡಿ.ಎನ್ ಹೆಗಡೆಯವರಿಗೆ ‘ಸಹಕಾರ ರತ್ನ’  ಪ್ರಶಸ್ತಿ ಲಭ್ಯವಾಗಿರುವ ಬಗ್ಗೆ.

ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳವು ಪ್ರತಿವರ್ಷ ರಾಜ್ಯದ ವಿವಿಧ ಸಹಕಾರ ಇಲಾಖೆಯಲ್ಲಿ ಸುರ್ಧೀಘವಾಗಿ ಸೇವೆ ಸಲ್ಲಿಸಿರುವಂತಹ ಮಹನಿಯರನ್ನು ಗುರುತಿಸಿ “ಸಹಕಾರ ರತ್ನ” ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಗುವುದು. ೨೦೨೧ನೇ ಸಾಲಿನ “ಸಹಕಾರ ರತ್ನ” ಪ್ರಶಸ್ತಿ ಪ್ರದಾನ ಕಾರ್ಯಕ್ರಮವನ್ನು ದಿನಾಂಕ : ೨೦.೦೩.೨೦೨೨ ರಂದು ಬೆಂಗಳೂರಿನಲ್ಲಿ ನಡೆಸಲಾಯಿತು ಹಾಗೂ ಕರ್ನಾಟಕ ಹಾಲು ಮಹಾಮಂಡಳದಲ್ಲಿ ಸುರ್ಧೀಘ ೩೭ ವರ್ಷಗಳ ಕಾಲ ಸೇವೆ ಸಲ್ಲಿಸಿರುವ ಡಾ.ಡಿ.ಎನ್ ಹೆಗಡೆಯವರಿಗೆ “ಸಹಕಾರ ರತ್ನ” ಪ್ರಶಸ್ತಿ ಪ್ರದಾನ ಮಾಡÀಲಾಗಿದೆ. ಇದು ಕಹಾಮದ ಅಧಿಕಾರಿಗೆ ದೊರಕಿರುವ ದೊಡ್ಡ ಗೌರವದ ವಿಷಯವಾಗಿದೆ.

೧೯೮೪ರಲ್ಲಿ ಪಶುವೈದ್ಯಾಧಿಕಾರಿ ಹುದ್ದೆಗೆ ಕರ್ನಾಟಕ ಹಾಲು ಮಹಾ ಮಂಡಳದ ಸಂಸ್ಥೆಯಲ್ಲಿ ಸೇರ್ಪಡೆ.

ತರಬೇತಿ ಸಂಸ್ಥೆಯಲ್ಲಿ ಉಪ ವ್ಯವಸ್ಥಾಪಕರಾಗಿ ಕೆಲಸ ನಿರ್ವಹಿಸಿದ ಅನುಭವ : 

ತಮ್ಮ ವ್ಯಾಪ್ತಿಯಲ್ಲಿ ೫೦೦ ಕ್ಕೂ ಅಧಿಕಕೃತಕ ಗರ್ಭಧಾರಣಾ ಕಾರ್ಯಕರ್ತರು, ಪ್ರಾಥಮಿಕ ಹಾಲು ಉತ್ಪಾದಕರ ಸಹಕಾರ ಸಂಘಗಳ ಕಾರ್ಯ ನಿರ್ವಹಣೆ ಹಾಗು ಹಾಲು ಒಕ್ಕೂಟ ವ್ಯವಸ್ಥೆಯ ಸುಮಾರು ೧೫,೦೦೦ ಕ್ಕೂ ಅಧಿಕ ಕಾರ್ಯಕರ್ತರನ್ನು ತಾಂತ್ರಿಕತೆಗೆ ರೂಪಿಸಿದ ಕೊಡುಗೆ ಇವರದ್ದಾಗಿರುತ್ತದೆ.

ಹಾಲು ಒಕ್ಕೂಟದಲ್ಲಿ ಶೇಖರಣೆ ಮತು ್ತತಾಂತ್ರಿಕ ವಿಭಾಗದ ವ್ಯವಸ್ಥಾಪಕರಾಗಿ ಕೆಲಸ ನಿರ್ವಹಿಸಿದ ಅನುಭವ :

ಧಾರಾವಾಡ ಹಾಲು ಒಕ್ಕೂಟದಲ್ಲಿ ವ್ಯವಸ್ಥಾಪಕರಾಗಿ ಕೆಲಸ ಆರಂಭಿಸಿದ್ದ ಇವರು ಕೇವಲ ಒಂದು ವರ್ಷ ಅವಧಿಯಲ್ಲಿನ ಇವರ ಪ್ರಯತ್ನದಿಂದಾಗಿ ಒಂದೇ ದಿನ ೧೧೦ ಪ್ರಾಥಮಿಕ ಹಾಲು ಉತ್ಪಾದಕ ಸಹಕಾರ ಸಂಘಗಳು ಕಾರ್ಯಾರಂಭಿಸುವAತೆ ಮಾಡಿದು ಇವರ ಹೆಗ್ಗಳಿಕೆಯಾಗಿರುತ್ತದೆ.

ಕರ್ನಾಟಕ ಹಾಲು ಮಹಾ ಮಂಡಳದ ಕೇಂದ್ರಕಚೇರಿಯಲ್ಲಿ ಪಶು ಸಂಗೋಪನಾ ವಿಭಾಗದಲ್ಲಿ ಜಂಟಿ

ನಿರ್ದೇಶಕರು ಹಾಗು ಅಪರ ನಿರ್ದೇಶಕರು ಹುದ್ದೆಯಲ್ಲಿ ಕೆಲಸ ನಿರ್ವಹಿಸಿದ ಅನುಭವ :

ಇದುವರೆಗೆ ಹೈನುಗಾರರು ಮತ್ತು ಕೆ.ಎಂ.ಎಫ್. ನಡುವೆ ಸಂಬAಧಗಳನ್ನು ಬೆಸೆಯಲು ನೆರವಾಗುವ ಹಲವಾರು ಕೇಂದ್ರ ಮತ್ತು ರಾಜ್ಯದ ಯೋಜನೆಗಳಿಗೆ ಕ್ರಿಯಾ ಯೋಜನಾ ವರದಿ ಸಿದ್ಧಪಡಿಸಿ, ಅಗತ್ಯ ಸಂವಹನಗಳೊAದಿಗೆ ಯೋಜನೆಗಳನ್ನು ಸಂಸ್ಥೆಗೆ ಒದಗಿಸಿಕೊಡುವಲ್ಲಿ ಯಶಸ್ವಿಯಾಗಿರುತ್ತಾರೆ. ಕರ್ನಾಟಕ ಹಾಲು ಮಹಾ ಮಂಡಳ ಅನುಷ್ಠಾನಗೊಳಿಸುವ/ಅನುಷ್ಠಾನಗೊಳಿಸಲಾಗುತ್ತಿರುವ ಪಶು ಸಂಗೋಪನಾ ವಿಭಾಗದ ಚಟುವಟಿಕೆಗಳಿಗೆ, ರಾಜ್ಯ ಸರ್ಕಾರ ಹಾಲು ಉತ್ಪಾದಕರಿಗೆ ನೀಡುತ್ತಿರುವ ಪ್ರೋತ್ಸಾಹಧನ ಯೋಜನೆಗೆ, ಕಿಸಾನ್ ಕ್ರೆಡಿಟ್‌ಕಾರ್ಡ್ ಯೋಜನೆಗೆ, ಕ್ಷೀರ ಸಂಜೀವಿನಿ ಯೋಜನೆಗೆ, ಇನ್ನಿತರೆ ಹಲವಾರು ನೂತನ ಯೋಜನೆಗಳಿಗೆ, ತರಬೇತಿ ಕಾರ್ಯಕ್ರಮಗಳಿಗೆ ರೂಪುರೇಷೆಗಳನ್ನು ರೂಪಿಸಲು ಹಾಗು ಅನುಷ್ಠಾನಕ್ಕೆ ತರಲು ನೆರವಾಗಿದ್ದು, ಸಂಸ್ಥೆಯ ಸಮಗ್ರ ಅಭಿವೃದ್ಧಿಗೆ ಶ್ರೀಯುತರು ಕಾರಣರಾಗಿರುತ್ತಾರೆ.

ಬೆಳಗಾವಿ ಹಾಲು ಒಕ್ಕೂಟದಲ್ಲಿ ವ್ಯವಸ್ಥಾಪಕ ನಿರ್ದೇಶಕರಾಗಿ ಕೆಲಸ ನಿರ್ವಹಿಸಿದ ಅನುಭವ;

ಶ್ರೀಯುತರು ವ್ಯವಸ್ಥಾಪಕ ನಿರ್ದೇಶಕರಾಗಿ ಅಧಿಕಾರವನ್ನು ವಹಿಸಿಕೊಂಡ ಬಳಿಕ ನಷ್ಟದ ಹಾದಿಯಲ್ಲಿ ಒಕ್ಕೂಟವನ್ನು ಲಾಭದ ದಿಕ್ಕಿನೆಡೆಗೆ ಕೊಂಡೊಯ್ದಿರುತ್ತಾರೆ. ಇವರ ಸೇವಾವಧಿಯಲ್ಲಿ ಬೆಳಗಾವಿ ಹಾಲು ಪ್ರಸ್ತುತ ಬೆಂಗಳೂರಿನ  ಕರ್ನಾಟಕ ಹಾಲು ಮಹಾ ಮಂಡಳ ಸಂಸ್ಥೆಯಲ್ಲಿ ಸಲಹಗಾರರಾಗಿ ಕೆಲಸ ನಿರ್ವಹಣೆ. ಒಕ್ಕೂಟದಲ್ಲಿ ರೈತ ಕಲ್ಯಾಣ ಟ್ರಸ್ಟ್ಅನ್ನು ಸಹಿತ ಆರಂಭಿಸಲಾಗಿರುತ್ತದೆ.

ಕರ್ನಾಟಕ ಹಾಲು ಮಹಾ ಮಂಡಳ ಸಂಸ್ಥೆಯೊAದಿಗಿನ ೩೯ ವರ್ಷಗಳ ಪಯಣದಲ್ಲಿ, ತಮ್ಮ ಬಹುತೇಕ ಸೇವೆಯನ್ನು ತರಬೇತಿ ಕೇಂದ್ರ ಹಾಗು ಕರ್ನಾಟಕ ಹಾಲು ಮಹಾ ಮಂಡಳದ ಕೇಂದ್ರ ಕಚೇರಿಗೆ ಸಲ್ಲಿಸಿರುವ ಕಾರಣ ಹಾಗು ಕರ್ನಾಟಕ ಹಾಲು ಮಹಾ ಮಂಡಳ ವತಿಯಿಂದ ಪ್ರಕಟಗೊಳ್ಳುತ್ತಿರುವ “ಕ್ಷೀರಸಾಗರ ಪತ್ರಿಕೆ”ಯಲ್ಲಿ ಸಹಕಾರ ಮತ್ತು ಹೈನುಗಾರಿಕೆ ಕುರಿತ ಲೇಖನಗಳಿಗೆ ನಿರಂತರ ಲೇಖಕರಾಗಿ, ಜತೆಗೆ ವಿವಿಧ ತರಬೇತಿ ಕೇಂದ್ರಗಳಲ್ಲಿ ಅತಿಥಿ ಉಪನ್ಯಾಸಗಳನ್ನು ನೀಡುವ ಮೂಲಕ ಹಾಗು ಪ್ರಾಥಮಿಕ ಹಾಲು ಉತ್ಪಾದಕ ಸಹಕಾರ ಸಂಘಗಳು ಏರ್ಪಡಿಸುವ ಚರ್ಚೆ ಮತ್ತು ವಿಚಾರ ಸಂಕಿರಣಗಳಲ್ಲಿ ಪಾಲ್ಗೊಳ್ಳುವ ಮೂಲಕ ಶ್ರೀಯುತರು ರೈತರೊಂದಿಗೆ ನೇರ ಸಂಪರ್ಕದಲ್ಲಿರುವ ಅನುಭವವನ್ನು ಹೊಂದಿರುತ್ತಾರೆ.

ಈ ಹಿನ್ನಲೆಯಲ್ಲಿ, ಸದರಿ ಮಾಹಿತಿಯನ್ನು ತಮ್ಮ ಪತ್ರಿಕೆ ಹಾಗು ವಾಹಿನಿಗಳ ಮೂಲಕ ಸಾರ್ವಜನಿಕರ ಮಾಹಿತಿಗಾಗಿ ತರಲು ಈ ಮೂಲಕ ಕೋರಿದೆ.

Address

Karnataka Co-operative Milk Producers’ Federation Ltd.
KMF Complex, P.B. No.2915, D.R.College Post, Dr.M.H.Marigowda Road, BANGALORE - 560 029. Karnataka.

ದೂರವಾಣಿ

080-260 96800

ಸಹಾಯವಾಣಿ:

1800 425 8030 toll free 10.00AM - 5.30PM

(ಎರಡನೇ ಶನಿವಾರ, ನಾಲ್ಕನೇ ಶನಿವಾರ, ಭಾನುವಾರ ಹಾಗು ಇತರೆ ರಾಜ್ಯ ಸರ್ಕಾರ ರಜಾ ದಿನಗಳನ್ನು ಹೊರತು ಪಡಿಸಿ)

ನಂದಿನಿ ನೆರವು ದೂರವಾಣಿ ಸಂಖ್ಯೆ (24*7):

080-66660000

ಫಾಕ್ಸ್:: 080-255 36105