1800 425 8030 ಟೋಲ್ ಫ್ರೀ 10.00AM - 5.30PM
ಎರಡನೇ ಶನಿವಾರ, ಭಾನುವಾರ ಹಾಗೂ ಸರ್ಕಾರಿ ರಜಾ ದಿನಗಳನ್ನು ಹೊರತುಪಡಿಸಿ

ತುಮಕೂರು ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ನಿಯಮಿತ

ಇತಿಹಾಸ ಪ್ರಸಿದ್ಧ ದೇವಸ್ಥಾನಗಳಿಗೆ ಮತ್ತು ವಿದ್ಯಾಸಂಸ್ಥೆಗಳಿಗೆ ಸುಪ್ರಸಿದ್ಧವಾದ ತುಮಕೂರು ಜಿಲ್ಲೆಯು ನೆಲಗಡಲೆಯಲ್ಲದೆ ಮತ್ತೊಂದು ಪ್ರಮುಖವಾದ ವಾಣಿಜ್ಯ ಬೆಳೆಯಾದ ತೆಂಗಿನಕಾಯಿಗೆ ಹೆಸರುವಾಸಿಯಾಗಿದೆ.  1975ರಲ್ಲಿ ಪ್ರಾರಂಭಗೊಂಡ ಹೈನು ಚಟುವಟಿಕೆಗಳಿಂದ ತುಮಕೂರು ಜಿಲ್ಲೆಯು ಹೈನುಗಾರಿಕೆಯನ್ನು ಮುಖ್ಯ ಕಸುಬುಗಳಲ್ಲಿ ಒಂದನ್ನಾಗಿ ಅಂಗೀಕರಿಸಿದೆ.  ತುಮಕೂರು ಒಕ್ಕೂಟವು 10 ತಾಲ್ಲೂಕುಗಳನ್ನು ಒಳಗೊಂಡಂತೆ ಕಾರ್ಯಾಚರಣೆಯಲ್ಲಿರುವ 1,233 ಹಾಲು ಉತ್ಪಾದಕರ ಸಂಘಗಳನ್ನು ಹೊಂದಿದೆ.

ದಿನಂಪ್ರತಿ 60,000ಲೀಟರ್ ಹಾಲನ್ನು ಸಂಸ್ಕರಿಸುವ ಸಾಮರ್ಥ್ಯದಿಂದ ಪ್ರಾರಂಭಗೊಂಡ ಮಲ್ಲಸಂದ್ರದಲ್ಲಿನ ಡೇರಿಯು 1.00 ಲಕ್ಷ ಲೀಟರ್ ಸಾಮರ್ಥ್ಯಕ್ಕೆ ವಿಸ್ತರಣೆಗೊಳಪಟ್ಟಿದ್ದು ನಂತರ 2013ರಲ್ಲಿ 3.25 ಲಕ್ಷ ಲೀಟರ್ ಹಾಲನ್ನು ಸಂಸ್ಕರಿಸುವ ಸಾಮರ್ಥ್ಯಕ್ಕೆ ವಿಸ್ತರಣೆಗೊಂಡಿದೆ.  

ಎಡೆಯೂರಿನಲ್ಲಿ 60ಸಾವಿರ ಲೀಟರ್, ಸಿರಾದಲ್ಲಿ 30ಸಾವಿರ ಲೀಟರ್, ಕಿಬ್ಬನಹಳ್ಳಿಯಲ್ಲಿ 60ಸಾವಿರ ಲೀಟರ್ ಮತ್ತು ಮಧುಗಿರಿಯಲ್ಲಿ 60ಸಾವಿರ ಲೀಟರ್ ಸಾಮರ್ಥ್ಯಗಳ ಶೀತಲಕೇಂದ್ರಗಳನ್ನು ಹೊಂದಿದ್ದು, ಒಟ್ಟಾರೆ 2.10 ಲಕ್ಷ ಲೀಟರ್ ಹಾಲನ್ನು ಶೀತಲೀಕರಿಸುವ ಸಾಮರ್ಥ್ಯವನ್ನು ಹೊಂದಿದೆ.  ಅಲ್ಲದೆ, ಒಕ್ಕೂಟದಲ್ಲಿ 156 ಬಲ್ಕ್ ಮಿಲ್ಕ್ ಕೂಲರ್,939 ಸ್ವಯಂಚಾಲಿತ ಹಾಲು ಶೇಖರಣೆ ಕೇಂದ್ರಗಳು ಕಾರ್ಯಾಚರಣೆಯಲ್ಲಿವೆ.

ಈ ಒಕ್ಕೂಟವು ಪ್ರತಿನಿತ್ಯ ಸರಾಸರಿ 7.84 ಲಕ್ಷ ಕೇಜಿ ಹಾಲನ್ನು ಶೇಖರಣೆ ಮಾಡುತ್ತಲಿದ್ದು, ಸರಾಸರಿ 3.09 ಲಕ್ಷ ಲೀಟರ್ ಹಾಲನ್ನು ಮಾರಾಟ ಮಾಡುತ್ತಿದೆ ಮತ್ತು 0.46 ಲಕ್ಷ ಕೇಜಿ ಮೊಸರನ್ನು ಮಾರಾಟ ಮಾಡುತ್ತಿದ್ದು, ಮೈಸೂರು ಪಾಕ್, ಪೇಡಾ, ಕೋವಾ, ಬರ್ಫಿ, ಬೆಣ್ಣೆ, ತುಪ್ಪ, ಕೆನಿರಹಿತ ಹಾಲಿನ ಪುಡಿ ಸಹ ಮಾರಾಟ ಮಾಡುತ್ತಿದೆ.

ಒಕ್ಕೂಟದ ಹಿರಿಮೆ:     ಭಾರತ ಸರ್ಕಾರದ ಪುನಶ್ಚೇತನಗೊಳಿಸುವ ಕಾರ್ಯಯೋಜನೆಯಡಿಯಲ್ಲಿ ಆರ್ಥಿಕ ಸಹಾಯವನ್ನು ಪಡೆದ ಹಾಲು ಒಕ್ಕೂಟಗಳಲ್ಲಿ ಆರ್ಥಿಕವಾಗಿ ಸ್ವಾವಲಂಬನೆಯನ್ನು  ಸಾಧಿಸಿದ ಪ್ರಥಮ ಒಕ್ಕೂಟ.

ತುಮಕೂರು ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ನಿಯಮಿತ.
ಬಿ.ಹೆಚ್. ರಸ್ತೆ, ಮಲ್ಲಸಂದ್ರ, ತುಮಕೂರು - 572 201, ಕರ್ನಾಟಕ
ಫೋನ್: 08162-206533/ 206490/ 206464/ 206472
ಫ್ಯಾಕ್ಸ್: 08162-206760/ 2207268
ಇ-ಮೈಲ್: [email protected]  Read More...

ವಿಳಾಸ

ಕರ್ನಾಟಕ ಸಹಕಾರಿ ಹಾಲು ಉತ್ಪಾದಕರ ಮಹಾಮಂಡಳಿ ನಿಯಮಿತ .
ಕಹಾಮ ಸಂಕೀರ್ಣ, ಅಂಚೆ ಪೆಟ್ಟಿಗೆ ಸಂಖ್ಯೆ- 2915,
ಡಿ. ಆರ್. ಕಾಲೇಜು ಅಂಚೆ, ಡಾ.ಎಂ.ಹೆಚ್.ಮರಿಗೌಡ ರಸ್ತೆ,
ಬೆಂಗಳೂರು-560029, ಕರ್ನಾಟಕ.

ದೂರವಾಣಿ

080-260 96800

ಸಹಾಯವಾಣಿ:

1800 425 8030 toll free 10.00AM - 5.30PM

(ಎರಡನೇ ಶನಿವಾರ, ನಾಲ್ಕನೇ ಶನಿವಾರ, ಭಾನುವಾರ ಹಾಗು ಇತರೆ ರಾಜ್ಯ ಸರ್ಕಾರ ರಜಾ ದಿನಗಳನ್ನು ಹೊರತು ಪಡಿಸಿ)

ನಂದಿನಿ ನೆರವು ದೂರವಾಣಿ ಸಂಖ್ಯೆ (24*7):

080-66660000

ಫಾಕ್ಸ್:: 080-255 36105